ಏಮ್ಸ್ ಹೋರಾಟಕ್ಕೆ 1122 ನೇ ದಿನ *ಏಮ್ಸ್ ಮಂಜೂರು ಮಾಡಿಸುವಲ್ಲಿ ನನ್ನ ಕಿರು ಪ್ರಯತ್ನ- ಬಸವರಾಜ ಪಾಟೀಲ್

AIIMS
AIIMS
Published on

ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಏಮ್ಸ್‌ಗಾಗಿ ಹೋರಾಟ ನಡೆಯುತ್ತಿದ್ದು, ಆದರೆ ಈವರೆಗೂ ಏಮ್ಸ್ ಮಂಜೂರು ಮಾಡುವ ಕುರಿತು ಸರ್ಕಾರಗಳು ಗಮನಹರಿಸುತ್ತಿಲ್ಲ. ಏಮ್ಸ್ ಮಂಜೂರು ಮಾಡಿಸುವಲ್ಲಿ ನನ್ನದು ಕಿರು ಪ್ರಯತ್ನವಾಗಿದ್ದು, ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿಸುವುದಾಗಿ ರಾಷ್ಟ್ರೀಯ ಸ್ವಾಭಿಮಾನ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪೂರ ಭರವಸೆ ನೀಡಿದರು.

ನಗರದ ಮಹತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ಕಳೆದ 1122 ನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿ, ರಾಜ್ಯದ ಸಂಪರ್ಕದಿಂದ ದೂರವಿದ್ದು ಸಾಕಷ್ಟು ಕಾಲವಾಗಿದ್ದರ ಹಿನ್ನೆಲೆ ಹೋರಾಟದ ಬಗ್ಗೆ ನನ್ನ ಗಮನಕ್ಕಿರಲಿಲ್ಲ. ಈಗಾಗಲೇ 1300 ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಏಮ್ಸ್ ಹೋರಾಟವೂ ನನ್ನ ಹೋರಾಟದ ಒಂದು ಭಾಗವಾಗಿದೆ ಎಂದರು. ಏಮ್ಸ್ ಹೋರಾಟದ ಕುರಿತಂತೆ ಹಾಗೂ ರಾಯಚೂರಿನಲ್ಲಿ ಏಕೆ ಏಮ್ಸ್ ಸ್ಥಾಪನೆಯಾಗಬೇಕು ಎಂಬುವುದರ ಕುರಿತು ಮಹತ್ವದ ದಾಖಲೆಗಳನ್ನು ಕಳಿಸಲಾಗಿದೆ. ಆದರೆ ಸಂಸದರಿಗೆ ಮನದಟ್ಟು ಮಾಡಲು ತಡವಾಗಿದೆ. ಈ ಹೋರಾಟಕ್ಕೆ ಸಾಕಷ್ಟು ಅನ್ಯಾಯವಾಗಿದೆ.

ನನ್ನ ಪ್ರಯತ್ನ ಪ್ರಯತ್ನವಾಗಿದೆ. ಆದರೆ ಯಾವುದೇ ಬೀಗವನ್ನಾದರೂ ಮಾಸ್ಟರ್ ಕೀ ಯಿಂದ ತಗೆಯಬಹುದಾಗಿದೆ. ಅದರಂತೆ ನನ್ನಲ್ಲಿರುವ ಮಾಸ್ಟರ್ ಕೀಯಿಂದ ರಾಯಚೂರಿನ ಏಮ್ಸ್ ಕನಸ್ಸಿನ ಬೀಗವನ್ನು ತೆಗೆಯುತ್ತೇನೆ ಎಂದರು. ಈಗಾಗಲೆ 26 ಜನ ಸಂಸದರು ಏಮ್ಸ್ ಅನ್ನು ರಾಯಚೂರಿಗೆ ನೀಡಬೇಕೆನ್ನುವ ಕುರಿತು ಪತ್ರ ಬರೆದಿದ್ದಾರೆ. ಏಮ್ಸ್ ಅನ್ನು ಚಾಣಕ್ಯ ತಂತ್ರದಿಂದಲೇ ಬರಿಸಿಕೊಳ್ಳಬೇಕಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಬಳಿ ಏಮ್ಸ್ ವಿಚಾರವಾಗಿ 35 ನಿಮಿಷಗಳ ಕಾಲ ಚರ್ಚಿಸಿದ್ದೇನೆ. ಈ ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೋದಿಯವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಶೀಘ್ರವೇ ಮೋದಿ ಬಳಿಗೆ ನಿಯೋಗ ಹೋಗಲಾಗುವುದು. ಆಗ ಪ್ರಧಾನಿ ಸಮಯ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅಳಕುವ ಅಗತ್ಯ ಇಲ್ಲ. ನಿರಾಸೆ ಪಡಬೇಕಿಲ್ಲ ಹೋರಾಟ ಯಶಸ್ವಿಯಾಗುತ್ತದೆ. ನೂರು ಪ್ರತಿಶತ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲಾಗುವುದು. ಅಲ್ಲಿಯವರೆಗೆ ಹೋರಾಟದಲ್ಲಿ ಉಗ್ರತೆ ಬೇಡ, ಹಿಂಸೆ

ಬೇಡ ಎಂದರು.

ಹೋರಾಟ ಸಮಿತಿ ಸಂಚಾಲಕ ಎಸ್.ಮಾರೆಪ್ಪ ಮಾತನಾಡಿ, ದೇಹಲಿಯಲ್ಲಿ ಆದ ರೈತರ ಹೋರಾಟಕ್ಕೆ ಸಮಾನವಾದ ಹೋರಾಟವಾಗಿ ಏಮ್ಸ್ ಹೋರಾಟ ಪರಿವರ್ತನೆಯಾಗುತ್ತದೆ. ಪ್ರತಿಯೊಬ್ಬರು ಬೆಂಬಲಿಸುವುದಾಗಿ ಹೇಳುತ್ತಾರೆ. ಪಾರ್ಲಿಮೆಂಟ್ ನಲ್ಲಿ ಸಂಸದರು ಗಮನಕ್ಕೆ ತಂದರೂ ಕ್ರಮವಾಗುತ್ತಿಲ್ಲ. ಧಾರ್ಮಿಕವಾಗಿಯೂ ಗಮನಕ್ಕೆ ತರಲಾಗಿದೆ. ಸಂಸದರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಕೇಳಿದರೂ. ಮನಸ್ಸು ಕರಗುತ್ಯಿಲ್ಲ. ಇದರಿಂದ ನಮ್ಮಲ್ಲಿ ಇನ್ನೂ ಸ್ವಾತಂತ್ರ್ಯ ಇಲ್ಲ ಎಂಬುವುದು ತಿಳಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕ ಡಾ ಬಸವರಾಜ ಕಳಸ, ಅಶೋಕ್ ಕುಮಾರ್ ಸಿ ಕೆ ಜೈನ, ಜಾನವೆಸ್ಲಿ, ಎನ್.ಮಹಾವೀರ, ಜಗದೀಶ್ ಪೂರ್ತಿಪ್ಲಿ, ರಮೇಶ ಕಲ್ಲೂರಕರ್, ಗುರುರಾಜ್ ಕುಲಕರ್ಣಿ, ಅನಿತಾ ನವಲಕಲ್, ಸುಲೋಚನಾ, ಎಂ.ಆರ್.ಭೇರಿ, ರವೀಂದ್ರನಾಥ ಪಟ್ಟಿ, ನರಸಪ್ಪ ಬಾಡಿಯಾಳ, ಎಸ್ ತಿಮ್ಮಾರೆಡ್ಡಿ, ಅಮರೇಗೌಡ ಪಾಟೀಲ್, ವಿನಯ ಚಿತ್ರಗಾರ, ಕೆ.ವಿದೇಶಿ ಬಾಬು, ಕಾಮರಾಜ್ ಪಾಟೀಲ, ಜೈ ಭೀಮ್, ಬಸವರಾಜ ಮಿಮಿಕ್ರಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net