ವಿಶ್ವ ರೇಬಿಸ್ ದಿನ ಆಚರಣೆ

29dvk 1
Published on

ಬೆಳಗಾವಿ: ಮಹಾನಗರ ಪಾಲಿಕೆ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಪಶು ಆಸ್ಪತ್ರೆಯ ರೈತ ಭವನದಲ್ಲಿ ವಿಶ್ವ ರೇಬೀಸ್ ದಿನದ ಪ್ರಯುಕ್ತ ಭಾನುವಾರ ಜಾಗೃತಿ ಹಾಗೂ ಶ್ವಾನಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉಪ ಮೇಯರ್ ವಾಣಿ ವಿಲಾಸ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಸೇವಕ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಗಿರೀಶ ಧೋಂಗಡಿ, ರಾಜೇಂದ್ರ ಜೈನ, ಡಿಎಚ್‌ಒ ಡಾ.ಈಶ್ವರ ಗಡಾದ, ಪಾಲಿಕೆ ಆಯುಕ್ತ ಶುಭಾ ಬಿ. ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ರವಿ ಸಾಲಿಗೌಡರ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ, ಇತರರಿದ್ದರು.

ಈ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಲಸಿಕೆ ನೀಡಲಾಯಿತು. ರಂಗೋಲಿ ಬಿಡಿಸುವ ಮೂಲಕ ಬೆಳಗಾವಿ ತಾಲೂಕಿನ ಪಶು ಸಖಿಯರು ರೇಬಿಸ್ ರೋಗದ ಜಾಗೃತಿ ಮೂಡಿಸಿದರು.

ಪ್ರಾಣಿ ದಯಾ ಸಂಘದ ಸದಸ್ಯರು, ಸ್ವಯಂ ಸೇವಕರು ಹಾಗೂ ಪ್ರಾಣಿ ಪ್ರಿಯರಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ವಿತರಿಸಲಾಯಿತು.

ಪಾಲಿಕೆ ಪರಿಸರ ಅಭಿಯಂತರ ಅಶೋಕ ಸಜ್ಜನ ಸ್ವಾಗತಿಸಿದರು. ಡಾ.ಶ್ರೀಕಾಂತ ಗಾವಿ ನಿರೂಪಿಸಿದರು. ಡಾ.ಆನಂದ ಪಾಟೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net