

ದಾವಣಗೆರೆ ಮಹಿಳಾ ನಿಲಯ ಗುರುವಾರ ಇಬ್ಬರು ಅನಾಥ ಯುವತಿಯರ ಮದುವೆಗೆ ಸಾಕ್ಷಿಯಾಯಿತು.
ನಿಲಯದಲ್ಲಿದ್ದ ಅನಿತಾರನ್ನು ಸಿದ್ದಾಪುರ ತಾಲೂಕು ಬಾಳೆಕೊಪ್ಪದ ವಿನಾಯಕ ಸುಬ್ಬುರಾಯ ಹೆಗಡೆ ಕೈಹಿಡಿದರೆ, ರೇಣುಕಾ ಗೊರಪ್ಪನವರ್ ಅವರನ್ನು ಶಿರಸಿ ತಾಲೂಕು ಶಿವಳ್ಳಿಯ ನಾಗೇಂದ್ರ ಜನಾರ್ದನ ಭಟ್ಟ ಬಾಳಸಂಗಾತಿಯಾಗಿ ಸ್ವೀಕರಿಸಿದರು. ಡಿಸಿ ಮಹಾಂತೇಶ ಬೀಳಗಿ ಕನ್ಯಾದಾನ ಮಾಡಿದರು.
ಇದೇ ವೇಳೆ ಜಗಳೂರು ತಾಲೂಕು ಅಣಬೂರು ಗೊಲ್ಲರಹಟ್ಟಿಯಿಂದ ಹೊರಗಿದ್ದ ಮೂಗ ಮಹಿಳೆಯ ಮಗುವಿಗೆ ‘ಶ್ರೀಕೃಷ್ಣ’ ಎಂದು ನಾಮಕರಣವನ್ನೂ ಮಾಡಲಾಯಿತು.