ವಿಮುಕ್ತ ದೇವದಾಸಿಯರಿಗೆ ಮತ ಸಂಕಲ್ಪ ಜಿಲ್ಲಾಡಳಿತದಿಂದ ಮತದಾನ ಜಾಗೃತಿ

IMG-20240406-WA0184.jpg
Published on

ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಮುಕ್ತ ದೇವದಾಸಿಯರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಂಜೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮತದಾರರ ಸಂಕಲ್ಪ ವಿಧಿ ಬೋಧಿಸಿದರು. ನಂತರ ಕಚೇರಿ ಬಳಿ ಮಾನವ ಸರಪಳಿ ನಿರ್ಮಿಸಿ ಮತದಾನ ಸಂಕಲ್ಪ ಮಾಡಲಾಯಿತು.
ಮತದಾನ ನಮ್ಮ ಹಕ್ಕು. 18 ವರ್ಷ ಮೇಲ್ಪಟ್ಟ, ಮತದಾರರಾದ ಪ್ರತಿಯೊಬ್ಬರೂ ತಪ್ಪದೇ ಮೇ.7 ರಂದು ಮತದಾನ ಮಾಡಿ ಶೇಕಡವಾರು ಹೆಚ್ಚಳವಾಗುವಂತೆ ನೋಡಿಕೊಳ್ಳಬೇಕು. 85 ವರ್ಷ ವಯೋಮಾನದವರಿಗೆ ಅವರಿರುವ ಸ್ಥಳದಲ್ಲೇ ಸಿಬ್ಬಂದಿ ಬಂದು ಮತ ಪಡೆದುಕೊಳ್ಳುವರು ಎಂದು ಡಿಸಿ ಹೇಳಿದರು.
ದೇಶದ ಅಭಿವೃದ್ಧಿಗೆ ಪ್ರತಿ ಮತವೂ ಮಹತ್ವದ್ದಾಗಿದೆ. ಈ ಬಗ್ಗೆ ತಾತ್ಸಾರ ಮಾಡದೆ ಸ್ವಇಚ್ಛೆಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ನೆರೆಹೊರೆಯವರಿಗೂ ಪ್ರೇರೇಪಣೆ ನೀಡಬೇಕು. ಮತಗಟ್ಟೆಗೆ ಆಗಮಿಸುವ ಎಲ್ಲರಿಗೂ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
  ಜಿಪಂ ಸಿಇಒ ಹಾಗೂ  ಸ್ವೀಪ್ ಸಮಿತಿಯ ಅಧ್ಯಕ್ಷ ಸುರೇಶ್ ಬಿ.ಇಟಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಜಿ.ಪಂ. ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಶಾರದಾ ದೊಡ್ಡಗೌಡ್ರು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net