ಸುಡುಗಾಡು ಸಿದ್ದರ ಸಂಕಷ್ಟಕ್ಕೆ ಸ್ಪಂದನೆ

dvg thasildar edit 22
ಸುಡುಗಾಡು ಸಿದ್ದರ ಜೋಪಡಿಗಳಿಗೆ ಅವಶ್ಯಕವಾಗಿದ್ದ ಒಟ್ಟು 32 ತಾಡಪಾಲುಗಳನ್ನು ತಹಸೀಲ್ದಾರ್ ಬಿ.ಎನ್. ಗಿರೀಶ್ ವಿತರಿಸಿದರು.
Published on


ದಾವಣಗೆರೆ: ಸುಡುಗಾಡು ಸಿದ್ದರಿಗೆ ಅನಿಶ್ಚಿತತೆ ತಂದ ಲಾಕ್‌ಡೌನ್ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆ ಏ.19 ರಂದು ಪ್ರಕಟಿಸಿದ ವರದಿಗೆ ದಾವಣಗೆರೆ ತಾಲೂಕು ಆಡಳಿತ ಸ್ಪಂದಿಸಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ 32 ಕುಟುಂಬಗಳು ಜೋಪಡಿಯಲ್ಲಿ ವಾಸಿಸುತ್ತಿದ್ದು, ಮಳೆಯ ಆತಂಕ ಎದುರಿಸುತ್ತಿದ್ದವು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಬಿ.ಎನ್. ಗಿರೀಶ್, ಅಲ್ಲಿನ ಜೋಪಡಿಗಳಿಗೆ ಅವಶ್ಯಕವಾಗಿದ್ದ ಒಟ್ಟು 32 ತಾಡಪಾಲುಗಳನ್ನು ವಿತರಿಸಿದರು.

ಅಲ್ಲದೆ ಅವರೊಂದಿಗೆ ಆಗಮಿಸಿದ್ದ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿತು. ನೋಡೆಲ್ ಅಧಿಕಾರಿ, ಗ್ರಾಮ ಲೆಕ್ಕಿಗರ ಫೋನ್ ನಂಬರ್ ನೀಡಿದ ತಹಸೀಲ್ದಾರ್ , ನಿಮಗೆ ಅಥವಾ ಮಕ್ಕಳಿಗೆ ಜ್ವರ ಇನ್ನಿತರೆ ಆರೋಗ್ಯ ಸಮಸ್ಯೆಯಾದಲ್ಲಿ ಕರೆ ಮಾಡಿದರೆ, ವೈದ್ಯರು ಇಲ್ಲಿಗೇ ಆಗಮಿಸಿ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net