

ದಾವಣಗೆರೆ: ನಗರದ ಎಸ್‌ಎಸ್ ಬಡಾವಣೆ ಎ ಬ್ಲಾಕ್‌ನ ಅಥಣಿ ಕಾಲೇಜು ರಸ್ತೆಯ ಮನೆಯ ಬಾಗಿಲನ್ನು ಆಯುಧದಿಂದ ಮೀಟಿ, ಮುರಿದ ಕಳ್ಳರು 7.92 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮನೆ ಮಾಲೀಕ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ನಲ್ವಾಡ ಎಂಬುವರು ಕುಟುಂಬ ಸದಸ್ಯರೊಂದಿಗೆ ಜೂ.7ರಂದು ಬೆಂಗಳೂರಿಗೆ ತೆರಳಿದ್ದರು. ಮನೆಗೆಲಸದಾಕೆ ಸಾಕಮ್ಮ ನೀಡಿದ ಮಾಹಿತಿಯಂತೆ ಜೂ. 9ರಂದು ಮರಳಿದಾಗ ಮನೆಯಲ್ಲಿ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿದೆ.
8 ಗ್ರಾಂನ ಒಂದು ಉಂಗುರ, 55 ಗ್ರಾಂ ಮೌಲ್ಯದ 1 ಚಿನ್ನದ ಚೈನ್, 45 ಗ್ರಾಂ.ನ ಒಂದು ನಕ್ಲೇಸ್, 10 ಗ್ರಾಂ. ನ ಒಂದು ಬ್ರಾಸ್‌ಲೈಟ್, ಬೆಳ್ಳಿ ನಾಣ್ಯಗಳು 12 ಸಾವಿರ ನಗದು ಹಾಗೂ ಬ್ಯಾಂಕ್ ಲಾಕರ್ ಕೀ, ಎ.ಟಿ.ಎಂ ಕಾರ್ಡ್, ಚುನಾವಣಾ ಕಾರ್ಡ್‌ಗಳು ಕಳವಾಗಿದ್ದಾಗಿ ವಿದ್ಯಾನಗರ ಠಾಣೆಗೆ ಸೋಮವಾರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.