ತಾಜ್‌ಮಹಲ್-2 ಚಿತ್ರ ಬಿಡುಗಡೆ ಸೆಪ್ಟೆಂಬರ್‌ಗೆ

Davangere, Taj Mahal-2 movie, release,
Published on

ದಾವಣಗೆರೆ: ತಾವೇ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿರುವ ತಾಜ್‌ಮಹಲ್-2 ಚಿತ್ರ ಸೆಪ್ಟೆಂಬರ್ 2ರಂದು ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ದೇವರಾಜ್ ಕುಮಾರ್ ತಿಳಿಸಿದರು.

ಇದೊಂದು ಸದಭಿರುಚಿ ಹಾಗೂ ಉತ್ತಮ ಪ್ರೇಮಕಥೆಯುಳ್ಳ ಚಿತ್ರ. ಕುಟುಂಬ ಸದಸ್ಯರು ಒಟ್ಟಿಗೇ ಕುಳಿತು ನೀಡಬಹುದಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇಕಪ್‌ಮ್ಯಾನ್ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ನಿರ್ದೇಶಕನಾಗಿ ಡೇಂಜರ್ ರೆನ್, ನಿಶ್ಯಬ್ದ-2, ಅನುಷ್ಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ ಎಂದು ತಿಳಿಸಿದರು.

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ಕಥಾ ಹಂದರದ ಚಿತ್ರದಲ್ಲಿ ಪ್ರಥಮ ಬಾರಿ ನಾಯಕ ನಟನಾಗಿ ಅಭಿನಯಿಸಿದ್ದೇನೆ. ಟ್ರೇಲರ್‌ಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.

ಕಬ್ಬಿನ ಜ್ಯೂಸ್ ಮಾರುವ ಯುವಕನ ಬಾಳಿನಲ್ಲಿ ನಡೆಯುವ ಘಟನೆಗಳ ಸುತ್ತ ಚಿತ್ರ ಹೆಣೆಯಲಾಗಿದೆ. ರಾಜ್ಯದ ವಿವಿಧೆಡೆ ಪ್ರಚಾರ ಕಾರ್ಯ ನಡೆದಿದೆ. ತುಮಕೂರು, ಶಿರಾ, ಚಿತ್ರದುರ್ಗ ಇತರೆ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಚಿತ್ರದಲ್ಲಿ ಶೋಭರಾಜ್, ತಬಲಾ ನಾಣಿ, ಸುಧಿ ಇತರರು ತಾರಾಗಣದಲ್ಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net