ಬೆಂಬಲ ಬೆಲೆಗೆ ಬೆಳೆ ಖರೀದಿಸಲು ರೈತ ಸಂಘ ಆಗ್ರಹ

1001237680.jpg
Published on

ದಾವಣಗೆರೆ: ಮೆಕ್ಕೆಜೋಳ, ಭತ್ತ, ರಾಗಿ ಇತರೆ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾ ಘಟಕದಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಹೆಚ್ಚಿದ ಮುಂಗಾರು ಮಳೆಯಿಂದಾಗಿ ಬಹುತೇಕ ಬೆಳೆಗಳು ಹಾಳಾಗಿವೆ. ಇಳುವರಿ ಕುಂಠಿತವಾಗಿದೆ. ಈ ಹಿಂದೆ ಕೆಲವು ಬೆಳೆಗಳು ಒಣಗಿಹೋಗಿವೆ. ಇರುವ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಹೀಗಾಗಿ ಸರ್ಕಾರ ಮೆಕ್ಕೆಜೋಳಕ್ಕೆ 3 ಸಾವಿರ ರೂ.ಗಳ ಬೆಂಬಲ ಬೆಲೆ ಘೋಷಿಸಬೇಕು. ಜಿಲ್ಲೆಯ 1.65 ಹೆ. ಜಮೀನಿನಲ್ಲಿ ಬೆಳೆದ ಭತ್ತಕ್ಕೆ ಸರ್ಕಾರ 3 ಸಾವಿರ ರೂ.ಗಳ ಬೆಂಬಲ ಬೆಲೆ ನೀಡಿ ತುರ್ತಾಗಿ ಖರೀದಿ ಕೇಂದ್ರ ತೆರೆಯಬೇಕು. ಇನ್ನುಳಿದ ಬೆಳೆಗಳಿಗೂ ಪ್ರೋತ್ಸಾಹಧನ ನೀಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಅಂಜಿನಪ್ಪ ಪೂಜಾರಿ, ರಾಂಪುರ ಬಸವನಗೌಡ, ಹೆಬ್ಬಾಳು ರಾಜಯೋಗಿ, ಮಿಯಾಪುರ ತಿರಮಲೇಶ್, ಪ್ರತಾಪ್ ರಾಮಜೋಗಿ, ನಾಗರಕಟ್ಟೆ ಜಯಾನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net