ಶೇ.15.84 ಫಲಿತಾಂಶ ಇಳಿಮುಖ   ಎಸ್ಸೆಸ್ಸೆಲ್ಸಿ-ದಾವಣಗೆರೆ ಜಿಲ್ಲೆಗೆ 23ನೇ ಸ್ಥಾನ

1000123536.jpg
Published on

ದಾವಣಗೆರೆ: ಗುರುವಾರ , 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ದಾವಣಗೆರೆ ಜಿಲ್ಲೆ ಶೇಕಡವಾರು 74.28ರ ರಿಸಲ್ಟ್‌ನೊಂದಿಗೆ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ 23 ನೇ ಸ್ಥಾನ ಪಡೆದಿದೆ.ಕಳೆದ ಬಾರಿ ಶೇ. 90.12 ರಿಸಲ್ಟ್‌ನೊಂದಿಗೆ 14ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ಶೇ. 15.84ರಷ್ಟು ಫಲಿತಾಂಶ ಕುಸಿತ ಕಂಡಿದೆ. ಒಟ್ಟು 10 ಸ್ಥಾನಗಳ ಹಿಮ್ಮುಖವಾಗಿದೆ. ಪರೀಕ್ಷೆಗೆ ಕುಳಿತ 20602 ವಿದ್ಯಾರ್ಥಿಗಳಲ್ಲಿ 15303 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.ಪರೀಕ್ಷೆ ಎದುರಿಸಿದ 10610 ಬಾಲಕಿಯರಲ್ಲಿ 8756 ಮಂದಿ ತೇರ್ಗಡೆ( ಶೇ. 82.53)ಯಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. 9992 ಬಾಲಕ ಪರೀಕ್ಷಾರ್ಥಿಗಳಲ್ಲಿ 6547 (ಶೇ.65.52) ಮಂದಿ ಉತ್ತೀರ್ಣರಾಗಿದ್ದಾರೆ.ನಗರವಾಸಿ 8024 ವಿದ್ಯಾರ್ಥಿಗಳಲ್ಲಿ 6230 ಮಂದಿ (ಶೇ. 77.64) ತೇರ್ಗಡೆಯಾಗಿದ್ದರೆ, 12578 ಗ್ರಾಮೀಣ ವಿದ್ಯಾರ್ಥಿಗಳಲ್ಲಿ 9073 ಪಾಸ್ (ಶೇ.72.13) ಆಗಿದ್ದಾರೆ. ಕನ್ನಡ ವಿಷಯದಲ್ಲಿ 361 ಮಕ್ಕಳು ಪೂರ್ಣ 125 ಅಂಕ ಪಡೆದಿದ್ದಾರೆ.* ಇಂಗ್ಲಿಷ್ ಮಾಧ್ಯಮದಲ್ಲಿ ಹೆಚ್ಚು ರಿಸಲ್ಟ್ಇಂಗ್ಲಿಷ್ ಮಾಧ್ಯಮದಲ್ಲಿ ಶೇ.88.25ರಷ್ಟು ಫಲಿತಾಂಶ ಸುಧಾರಣೆಯಾಗಿದೆ. ಇಲ್ಲಿ ಪರೀಕ್ಷೆ ಎದುರಿಸಿದ 8619 ಮಕ್ಕಳಲ್ಲಿ 7606 ಮಂದಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದ 11245 ಮಂದಿ ಪರೀಕ್ಷೆಗೆ ಕೂತವರ ಪೈಕಿ 7214 ಮಕ್ಕಳು (ಶೇ. 64.15) ತೇರ್ಗಡೆ ಹೊಂದಿದ್ದಾರೆ. ಉರ್ದು ಮಾಧ್ಯಮದ 738 ವಿದ್ಯಾರ್ಥಿಗಳ ಪೈಕಿ ಪಾಸಾದವರು 483 (ಶೇ.65.45) ಮಂದಿ.
ದಾವಣಗೆರೆ ದಕ್ಷಿಣ ವಲಯ ಫಸ್ಟ್ ಇನ್ನು ವಲಯವಾರು ಪ್ರಗತಿಯನ್ನು ಅವಲೋಕಿಸಿದರೆ ದಾವಣಗೆರೆ ದಕ್ಷಿಣ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇ. 81.63 ಮಕ್ಕಳು ಪಾಸಾಗಿದ್ದಾರೆ. ಉಳಿದಂತೆ ಕ್ರಮಬದ್ಧವಾಗಿ ಹೊನ್ನಾಳಿ (ಶೇ. 80.72) ದ್ವಿತೀಯ, ದಾವಣಗೆರೆ ಉತ್ತರ (ಶೇ. 74.34) ತೃತೀಯ, ಜಗಳೂರು(ಶೇ. 70.01) ಚತುರ್ಥ, ಚನ್ನಗಿರಿ (ಶೇ. 70) ಐದು ಮತ್ತು ಹರಿಹರ ಶಿಕ್ಷಣ ವಲಯ (ಶೇ. 64.05) ರಿಸಲ್ಟ್‌ನೊಂದಿಗೆ ಕಡೆಯ ಸ್ಥಾನ ಗಳಿಸಿದೆ.


ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಪ್ರೇರಣಾ ಶಿಬಿರ, ವಿಷಯವಾರು ಶಿಕ್ಷಕರ ಕ್ಲಬ್, ಫಲಿತಾಂಶ ಪೂರಕ ಗ್ರಂಥಾಲಯ ಮೊದಲಾದ ಕಾರ್ಯಕ್ರಮ ಆಯೋಜಿಸಿದ್ದೆವು. ಆದರೆ ಕಳೆದ ಬಾರಿಗಿಂತ ಕಡಿಮೆ ಫಲಿತಾಂಶ ಬಂದಿದೆ. ನಾವು ಯಾವ ಯೋಜನೆ ಮಾಡಿದರೂ ವಿದ್ಯಾರ್ಥಿಗಳುನ ಒಳಗೊಳ್ಳುವುದು ಮುಖ್ಯ. ಈ ಬಾರಿಯ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಪರೀಕ್ಷಾ ಕ್ರಮದಲ್ಲಿ ಸುಧಾರಣೆ ತಂದಿದೆ.
ಎಚ್. ಕೊಟ್ರೇಶ್, ಡಿಡಿಪಿಐ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net