ಎಸ್ಸೆಸ್ಸೆಲ್ಸಿ; ಶತಕ ಸಿಡಿಸಿದ 36 ವಿದ್ಯಾಲಯಗಳು

1000124097.jpg
Published on

ದಾವಣಗೆರೆ: ಜಿಲ್ಲೆಯ 9 ಸರ್ಕಾರಿ, 1 ಅನುದಾನಿತ ಹಾಗೂ 26 ಅನುದಾನರಹಿತ ಸೇರಿ 36 ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶತಕ ಬಾರಿಸಿವೆ. ಅವುಗಳ ವಿವರ ಇಂತಿದೆ.

ಸರ್ಕಾರಿ ಶಾಲೆಗಳು: ದಾವಣಗೆರೆಯ ಅಂಧ ಮಕ್ಕಳ ಶಾಲೆ, ಹಾಲುವರ್ತಿಯ ಶಾಲೆ, ಆಂಜನೇಯ ಬಡಾವಣೆಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಬಾಲಕಿಯರ ಶಾಲೆ, ವಡೇರಹಳ್ಳಿಯ ಮೊರಾರ್ಜಿ ಶಾಲೆ, ಕೊಂಡಜ್ಜಿಯ ಇಂದಿರಾಗಾಂಧಿ ವಸತಿ ಶಾಲೆ, ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಹೊನ್ನಾಳಿಯ ಮಾದನಬಾವಿಯ ಮೊರಾರ್ಜಿ ದೇಸಾಯಿ ಶಾಲೆ, ಜಗಳೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಜಗಳೂರು ತಾಲೂಕು ಬಿಳಿಚೋಡಿನ ಮೊರಾರ್ಜಿ ವಸತಿ ಶಾಲೆ.
ಅನುದಾನಿತ ಶಾಲೆಗಳು: ಎಸ್‌ಟಿಜೆ ಜೂನಿಯರ್ ಕಾಲೇಜು,
ಅನುದಾನರಹಿತ ಶಾಲೆಗಳು: ಚನ್ನಗಿರಿ ತಾಲೂಕು ಸಂತೆಬೆನ್ನೂರಿನ ಚೈತನ್ಯ ಗುರುಕುಲ ಶಾಲೆ, ದಾವಣಗೆರೆಯ ಜನತಾ ವಿದ್ಯಾಲಯ ಶಾಲೆ, ಯುನೈಟೆಡ್ ಇಂಟರ್‌ನ್ಯಾಷನಲ್ ಶಾಲೆ, ನಂದಗೋಕುಲ ಇಂಗ್ಲಿಷ್ ಮಾಧ್ಯಮ ಶಾಲೆ, ಆನಗೋಡು ಸಿದ್ದಲಿಂಗೇಶ್ವರ ಶಾಲೆ,.
 ವಿಜನ್ ಇಂಟರ್‌ನ್ಯಾಷನಲ್, ಕೊಂಡಜ್ಜಿ ರಸ್ತೆಯ ಎಸ್.ಎಂ.ಎಸ್. ಶಾಲೆ, ಶ್ರೀಮತಿ ಅನಸೂಯಮ್ಮ ಚಂದ್ರಶೇಖರಯ್ಯ ಸ್ಮಾರಕ ಶಾಲೆ, ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಹೊಸನಾಯ್ಕನಹಳ್ಳಿಯ ಗುರುಕುಲ ಪ್ರೌಢಶಾಲೆ, ಗೋಣಿವಾಡದ ಸೋಮೇಶ್ವರ ಶಾಲೆ, ಕೆ.ಬಿ. ಬಡಾವಣೆಯ ವಿದ್ಯಾಸಾಗರ ಇಂಗ್ಲಿಷ್ ಮಾಧ್ಯಮ ಶಾಲೆ, ನಿಸರ್ಗ ಇಂ. ಮಾಧ್ಯಮ ಶಾಲೆ, ಶ್ಯಾಗಲೆಯ ಕುವೆಂಪು ಪ್ರೌಢಶಾಲೆ, ನಿಟುವಳ್ಳಿಯ ರಾಷ್ಟ್ರೋತ್ಥಾನ ಶಾಲೆ, ಸೇಂಟ್‌ಜಾನ್ಸ್ ಇಂ. ಮಾಧ್ಯಮ ಶಾಲೆ, ಎಸ್‌ಟಿಜೆ ಸಂಯುಕ್ತ ಶಾಲೆ, ಪಿ.ಜೆ. ಬಡಾವಣೆಯ ಈಶ್ವರಮ್ಮ ಶಾಲೆ, ಹದಡಿ ರಸ್ತೆಯ ಸೋಮೇಶ್ವರ ಶಾಲೆ, ಸಿದ್ಧಗಂಗಾ ಪ್ರೌಢಶಾಲೆ, ಹರಿಹರ ತಾಲೂಕು ಕುಂಬಳೂರಿನ ಶ್ರೀ  ಬಸವ ಗುರುಕುಲ ಇಂ. ಮಾಧ್ಯಮ ಶಾಲೆ, ಹೊನ್ನಾಳಿ ತಾಲೂಕು ತುಮ್ಮಿನಕಟ್ಟೆಯ ಸ್ವಾಮಿ ವಿವೇಕಾನಂದ ಶಾಲೆ, ಗೊಲ್ಲರಹಳ್ಳಿಯ ವೆಂಕಟೇಶ್ವರ ಇಂ. ಮಾಧ್ಯಮ ಶಾಲೆ, ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಸ್ಮಾರಕ ಶಾಲೆ, ಚೀಲೂರಿನ ನ್ಯಾಷನಲ್ ಪ್ರೌಢಶಾಲೆ, ಜಗಳೂರು ತಾಲೂಕು ದಿದ್ದಿಗೆಯ ರೂರಲ್ ಪಬ್ಲಿಕ್ ಶಾಲೆ.
47 ಅಕ್ಷರಾಲಯ ಶೇ.40ಕ್ಕಿಂತ ಕಡಿಮೆ
ಜಿಲ್ಲೆಯ 8 ಸರ್ಕಾರಿ ಶಾಲೆ, 33 ಅನುದಾನಿತ ಹಾಗೂ 6 ಅನುದಾನರಹಿತ ಸೇರಿ 47 ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ. ವಿವರ ಹೀಗಿದೆ.
ಸರ್ಕಾರಿ: ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆ, ಕೆ.ಆರ್. ರಸ್ತೆಯ ಎಕ್ಸ್ ಮುನ್ಸಿಪಲ್ ಸ್ಕೂಲ್, ಕೊಡಗನೂರಿನ ಸರ್ಕಾರಿ ಜೂ. ಕಾಲೇಜು, ಹರಿಹರ ತಾ. ಕೊಕ್ಕನೂರಿನ ಸರ್ಕಾರಿ ಶಾಲೆ, ನಿಟ್ಟೂರಿನ ಸರ್ಕಾರಿ ಶಾಲೆ, ಹರಿಹರ ತಾ. ಕುಂಬಳೂರಿನ ಸರ್ಕಾರಿ ಶಾಲೆ, ಜಗಳೂರು ತಾ. ರಸ್ತೆಮಾಚಿಕೆರೆಯ ಸರ್ಕಾರಿ ಶಾಲೆ, ದೇವಿಕೆರೆಯ ಶಾಲೆ,
ಅನುದಾನಿತ: ಚನ್ನಗಿರಿ ತಾ. ತ್ಯಾವಣಗಿಯ ಎಸ್‌ಜೆಎಂ ಶಾಲೆ, ಮಾರುತಿ ಪ್ರೌಢಶಾಲೆ, ಮಣ್ಣಮ್ಮ ವಸತಿ ಶಾಲೆ, ಎಸ್‌ಕೆಎಂಎಸ್ ಮಿಲ್ಲತ್ ಪ್ರೌಢಶಾಲೆ, ಮೂಡಿಗೆರೆಯ ಮಣ್ಣಮ್ಮ ಪ್ರೌಢಶಾಲೆ, ಗರಗದ ರಂಗಸ್ವಾಮಿ ಶಾಲೆ, ಮಾವಿನಹೊಳೆಯ ಮಹಾರುದ್ರಸ್ವಾಮಿ ಶಾಲೆ, ದಾವಣಗೆರೆ ತಾ. ಐಗೂರಿನ ಬಸವೇಶ್ವರ ಶಾಲೆ, ಆಲೂರಿನ ಆಂಜನೇಯ ಸ್ವಾಮಿ ಶಾಲೆ, ಕಾಳಿಕಾದೇವಿ ರಸ್ತೆಯ ಡಾ. ರಾಜ್‌ಕುಮಾರ್ ಪ್ರೌಢಶಾಲೆ, ನಾಗರನಹಳ್ಳಿ ಆಂಜನೇಯ ಶಾಲೆ, ಎಂ.ಜಿ.ಎಂ.ಆರ್ ಶಾಲೆ, ಕಾಡಜ್ಜಿಯ ಬಿಸಲೇರಿ ಬಸಮ್ಮ ಭೀಮಪ್ಪ ಶಾಲೆ, ನೇತಾಜಿಸುಭಾಷ್ ಚಂದ್ರ ಬೋಸ್ ಶಾಲೆ, ನಿಟುವಳ್ಳಿ ಹೊಸ ಬಡಾವಣೆಯ ಎಸ್‌ವಿಎಸ್ ಶಾಲೆ, ಎಸ್ಸಿ-ಎಸ್ಟಿ ವಸತಿ ಶಾಲೆ, ಹುಚ್ಚವ್ವನಹಳ್ಳಿಯ  ಶ್ರೀಮತಿ ನಾಗಮ್ಮ ಕೇಶವಮೂರ್ತಿ ಶಾಲೆ, ಸಿದ್ದವೀರಪ್ಪ ಬಡಾವಣೆಯ ಹಳ್ಳಿ ಮಹದೇವಪ್ಪ ಶಾಲೆ, ನಿಟುವಳ್ಳಿಯ ದುರ್ಗಾಂಬಿಕಾ ಶಾಲೆ, ನಲ್ಕುಂದದ ವಸತಿ ಶಾಲೆ, ವಿಶ್ವಭಾರತಿ ವಿದ್ಯಾಪೀಠ, ಪಿ.ಜೆ.ಬಡಾವಣೆಯ ಬಕ್ಕೇಶ್ವರ ಶಾಲೆ, ಡಾ.ಬಿ.ಎಂ. ತಿಪ್ಪೇಸ್ವಾಮಿ ಸ್ಮಾರಕ ಶಾಲೆ, ಹರಿಹರ ತಾ. ದೂಳೆಹೊಳೆಯ ಜಿಎಂಸಿಜಿ ಶಾಲೆ, ಹರಿಹರದ ಎಂಆರ್‌ಬಿ ಶಾಲೆ, ಶ್ರೀ ಸಂಮೇಶ್ವರ ಶಾಲೆ, ಎಂ.ಎಂ.ಸಿ.ಎಸ್. ಶಾಲೆ, ಮಲೇಬೆನ್ನೂರಿನ ಬೀರಲಿಂಗೇಶ್ವರ ಶಾಲೆ, ಜಗಳೂರು ತಾ. ಡಾ. ಅಂಬೇಡ್ಕರ್ ಶಾಲೆ, ಜಿ. ಹನುಮಂತರೆಡ್ಡಿ ಸ್ಮಾರಕ ಶಾಲೆ, ಶ್ರೀ ಉಜ್ಜನಿ ಜಗದ್ಗುರು ಸಿದ್ದೇಶ್ವರ ಬಾಲಕಿಯರ ಶಾಲೆ.
ಅನುದಾನರಹಿತ: ಚನ್ನಗಿರಿ ತಾ. ಹಾರನಹಳ್ಳಿಯ ರಾಮಲಿಂಗೇಶ್ವರ ಸ್ವಾಮಿ ಶಾಲೆ, ವಿನೋಬನಗರದ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಾಲೆ, ರಾಘವೇಂದ್ರ ವಿದ್ಯಾನಿಕೇತನ ಶಾಲೆ, ಮಲೇಬೆನ್ನೂರಿನ ಶ್ರೀ ಬಾನು ಹೈಟೆಕ್ ಶಾಲೆ, ಹೊನ್ನಾಳಿ ತಾ. ಕುಂದೂರಿನ ರೇಣುಕಾ ಶಾಲೆ, ಸಾಸ್ವೆಹಳ್ಳಿಯ ಎಡಿವಿಎಸ್ ಶಾಲೆ.
---
ಶೂನ್ಯ ಸಂಪಾದಿತ ಶಾಲೆಗಳ ವಿಲೀನ ಕ್ರಮ
ಕಡಿಮೆ ಮಕ್ಕಳನ್ನು ಹೊಂದಿದ್ದು ಶೂನ್ಯ ಸಂಪಾದಿಸಿದ ದಾವಣಗೆರೆ ಭಾರತ್ ಕಾಲನಿಯ ನೇತಾಜಿಸುಭಾಷ್ ಚಂದ್ರ ಬೋಸ್ ಶಾಲೆ, ಎಸ್ಸೆಸ್ ಬಡಾವಣೆಯ ರಾಘವೇಂದ್ರ ವಿದ್ಯಾನಿಕೇತನ ಶಾಲೆ, ಸಾಸ್ವೆಹಳ್ಳಿಯ ಎಡಿವಿಎಸ್ ಶಾಲೆಗಳನ್ನು ಬೇರೊಂದು ಶಾಲೆಗೆ ವಿಳಿನ ಮಾಡಲು ಕ್ರಮ ವಹಿಸಲಾಗುವುದು ಎಂದು ಡಿಡಿಪಿಐ ಜಿ. ಕೊಟ್ರೇಶ್ ತಿಳಿಸಿದರು.
ಅಲ್ಲದೆ 40ಕ್ಕೂ ಕಡಿಮೆ ಫಲಿತಾಂಶ ಪಡೆದ ಎಲ್ಲ ಶಾಲೆಗಳ ಶಿಕ್ಷಕರಿಗೆ ನೋಟಿಸ್ ನೀಡಲಾಗುವುದು. ಡಯಟ್ ಹಾಗೂ ಡಿಡಿಪಿಐ ಕಚೇರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿ, ಆಯಾ ಶಾಲೆಗಳ ದತ್ತು ಪಡೆದು ಸುಧಾರಣೆಗೆ ಹಲವು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net