

ದಾವಣಗೆರೆ: ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಠಾಣೆ ಪೊಲೀಸರು, ಜನವರಿ ತಿಂಗಳಲ್ಲಿ ಇದುವರೆಗೆ ಸಂಚಾರ ನಿಯಮ ಉಲ್ಲಂಘಿಸಿದ 800 ಪ್ರಕರಣಗಳಿಂದ 4.5 ಲಕ್ಷ ರೂ.ಗಳ ದಂಡ ಸಂಗ್ರಹಿಸಿದ್ದಾರೆ.
ನಿಯಮ ಉಲ್ಲಂಘನೆ ಕುರಿತು ಕ್ಯಾಮರಾಗಳ ಮೂಲಕ ಸೆರೆಯಾಗಿ ಇ- ಚಲನ್ ಆಗಿ ದಂಡ ಪಾವತಿಸದ ಪ್ರಕರಣಗಳ ಪೈಕಿ ಹತ್ತು ಮತ್ತು ಅದಕ್ಕೂ ಮೇಲ್ಪಟ್ಟು ಇ ಚಲನ್ ಬಾಕಿ ಉಳಿಸಿಕೊಂಡಿದ್ದ ವಾಹನ ಮಾಲೀಕರು, ಸವಾರರನ್ನು ಪತ್ತೆ ಮಾಡಿದ ಅಧಿಕಾರಿಗಳು ಸಿಬ್ಬಂದಿ, ದಾವಣಗೆರೆ ದಕ್ಷಿಣ ಠಾಣೆಯಲ್ಲಿ ತಲಾ 5 ಸಾವಿರ ರೂ. ದಂಡ ಕಟ್ಟಿಸಿದರು.
ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದ್ದು ಈಗಾಗಲೇ ಸಂಚಾರ ನಿಯಮ ಉಲ್ಲಂಘಿಸಿ ಇ ಚಲನ್‌ನಡಿ ಬಾಕಿ ಉಳಿಸಿಕೊಂಡಿರುವ ವಾಹನ ಚಾಲಕರು ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಮತ್ತು ಮುಖ್ಯ ಅಂಚೆ ಕಚೇರಿಗೆ ಬಂದು ದಂಡ ಪಾವತಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
---