ಶಂಕರಾಚಾರ್ಯರ ಅದ್ದೂರಿ ಮೆರವಣಿಗೆ

1000127378.jpg
Published on

ದಾವಣಗೆರೆ: ಜಗದ್ಗುರು ಆದಿ ಶಂಕರಾಚಾರ್ಯ ಜಯಂತ್ಯುತ್ಸವ ಅಂಗವಾಗಿ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಭಾನುವಾರ ಶ್ರೀ ಶಂಕರಾಚಾರ್ಯರ ಅದ್ದೂರಿ ಮೆರವಣಿಗೆ ನಡೆಸಲಾಯಿತು.ಶಂಕರಾಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಧು ಅವರ ತಂಡದಿಂದ ಚಂಡೆ ವಾದನ, ಮಹಿಳೆಯರು ಹಾಗೂ ಮುಖಂಡರು ನೃತ್ಯದೊಂದಿಗೆ ಹೆಜ್ಜೆ ಹಾಕಿದರು.ಶ್ರೀ ಶಂಕರ ಸೇವಾ ಸಂಘದ ಉಪಾಧ್ಯಕ್ಷ ಮೋತಿ ಸುಬ್ರಹ್ಮಣ್ಯ ಉತ್ಸವದ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀನಿವಾಸ್ ಜೋಷಿ, ಮಾಜಿ ಅಧ್ಯಕ್ಷ ಡಾ. ಎಸ್.ಆರ್. ಹೆಗಡೆ,  ಪುರೋಹಿತರಾದ ಪುಟ್ಟಸ್ವಾಮಿ, ಸಂಘದ ಸದಸ್ಯರಾದ ವಿನಾಯಕ ಜೋಷಿ,  ಸುಬ್ಬಣ್ಣ (ಮಂಡಕ್ಕಿ) ಅನಿಲ್ ಬಾರೆಂಗಳ್, ಬಾಲಕೃಷ್ಣ ವೈದ್ಯ, ಚೈತನ್ಯ ನಾರಾಯಣಸ್ವಾಮಿ, ರಾಘವೇಂದ್ರ, ಶ್ರೀಕಾಂತ್ ಜೋಷಿ, ರಮೇಶ್ ಪಾಟೀಲ್, ಎಂ. ಶ್ರೀಕಾಂತ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net