

ದಾವಣಗೆರೆ: ಹರಪನಹಳ್ಳಿ ಪಟ್ಟಣದ ಟೆಂಟ್‌ನಲ್ಲಿದ್ದ ಒಂದು ವರ್ಷದ ಮಗುವನ್ನು ನವೆಂಬರ್ 16ರ ರಾತ್ರಿ ವೇಳೆ ಅಪಹರಿಸಲಾಗಿದ್ದು ಮಗುವನ್ನು ಹುಡುಕಿಕೊಡುವಂತೆ ಮಹಾರಾಷ್ಟ್ರ ರಾಜ್ಯ ಅಕ್ಕಲಕೋಟೆ ತಾಲೂಕು ಮೂಲದ ಅಲೆಮಾರಿ ಕುಟುಂಬವೊಂದು ಪೊಲೀಸರಲ್ಲಿ ಮನವಿ ಮಾಡಿದೆ.
ತಾಯಿ ಜತೆ ಮಲಗಿದ್ದ ಮಗು ಆರ್ಯನ್‌ನನ್ನು ಅಪಹರಣ ಮಾಡಲಾಗಿದ್ದು ಇದುವರೆಗೆ ಸುಳಿವು ದೊರೆತಿಲ್ಲ. ಹೊಟ್ಟೆಪಾಡಿಗಾಗಿ ಗಂಧದೆಣ್ಣೆ ಮಾರುತ್ತ, ಚಿಂದಿ ಆಯುವ ಕೆಲಸದಲ್ಲಿರುವ ನಮಗೆ ಕಷ್ಟವಾಗಿದೆ ಎಂದು ಪಾಲಕರಾದ ಯುವರಾಜ್ ಸಕಾರಾಂ ಪವಾರ್, ಸಾರಿಕ ಪವಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಬಾಬು ಪಂಡಿತ್ ಮಾತನಾಡಿ ಹರಪನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಇದುವರೆಗೆ ಮಗು ದೊರೆತಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಗುವಿನ ಸಂಬಂಧಿ ಬೋಪಾಲ್ ಬಾಬು ಪವಾರ್ ಇದ್ದರು.