

ದಾವಣಗೆರೆ: ವಿಜ್ಞಾನ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು, ಯುವಜನರು ಮಾರ್ಪಡಾಗಬೇಕಿದೆ ಎಂದು ಹರಿಹರದ ಸರ್ಕಾರಿ ಪಪೂ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮಹಮ್ಮದ್ ನಸ್ರುಲ್ಲಾ ಹೇಳಿದರು.
ನಗರದ ಸೇಂಟ್‌ಪಾಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಕಸಿತ ಭಾರತ್ 2047ರ ವಿಜ್ಞಾನ, ವಾಣಿಜ್ಯ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹೊಸ ಆವಿಷ್ಕಾರ ಕಂಡುಹಿಡಿಯುವಲ್ಲಿ ಪ್ರಯತ್ನಿಸಬೇಕು. ನೀವು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡದೆ ಉದ್ಯೋಗದಾತರಾಗುವ ಕಡೆ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎ.ಬಾಬು ಮಾತನಾಡಿ, ಒಂದು ದೇಶದ ಬೆಳವಣಿಗೆಗೆ ವಿಜ್ಞಾನ, ವಾಣಿಜ್ಯ ಕ್ಷೇತ್ರ ಎರಡರ ಅವಶ್ಯಕತೆ ಇದೆ. ಗ್ರಾಹಕರ ಬೇಡಿಕೆಯನ್ನು ವಾಣಿಜ್ಯ ರಂಗ ಗ್ರಹಿಸಿದರೆ, ವಿಜ್ಞಾನ ಕ್ಷೇತ್ರವು ಅದರ ತಯಾರಿಗೆ ಸಜ್ಜಾಗುತ್ತದೆ ಎಂದರು.
ಪ್ರಪಂಚದಲ್ಲಿ ಅತಿ ಹೆಚ್ಚು ಪದವೀಧರ ಯುವಕರು ಭಾರತದಲ್ಲಿದ್ದಾರೆ. ಹೊರ ದೇಶದಿಂದ ಆಮದು ಮಾಡಿಕೊಳ್ಳುವವರಾಗದೆ ರಫ್ತು ಮಾಡುವಂತಾಗಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತಾಧಿಕಾರಿ ಮೆಟಿಲ್ದಾ ಕಾರ್ಯಕ್ರಮ ಉದ್ಘಾಟಿಸಿದರು. ಸೇಂಟ್‌ಪಾಲ್ಸ್ ಕಾನ್ವೆಂಟ್‌ನ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವೆನಿಸ್ಸಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವೈಲೆಟ್ ಕುಮಾರಿ, ನಿರ್ಮಲಾ, ಪಪೂ ಕಾಲೇಜಿನ ಪ್ರಾಚಾರ್ಯ ಕೆ.ಟಿ.ಮೇಘನಾಥ್, ಉಪನ್ಯಾಸಕ ವಿಶ್ವನಾಥ್ ಇದ್ದರು.