ಪಂಚಮಸಾಲಿ ಮೀಸಲಿಗಾಗಿ ಹೋರಾಟ     ಮುರುಗೇಶ್ ನಿರಾಣಿ ಅಭಿಪ್ರಾಯ

1000236553.jpg
Published on

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಗಾಗಿ ಸದನದ ಒಳಗೆ ಹೊರಗೆ ಮಾತನಾಡಿದ್ದೇವೆ. ಈ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳಾದರೂ ಮೀಸಲಾತಿ ಬಗ್ಗೆ ಗಮನ ಹರಿಸಿಲ್ಲ. ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಗರಣ ಹಿನ್ನಲೆಯಲ್ಲಿ ಶಾಸಕ ನಾಗೇಂದ್ರ ಬಂಧನಕ್ಕೆ ಒಳಗಾಗಿದ್ದು ಶಾಸಕರು ಮುಖ್ಯಮಂತ್ರಿಯಾದಿಯಾಗಿ ತನಿಖೆ ನಡೆಯುತ್ತಿದೆ. ಎಲ್ಲರೂ ರಾಜೀನಾಮೆ ನೀಡಬೇಕು. ತಪ್ಪಿತಸ್ಥರಲ್ಲ ಎಂಬುದು ಸಾಬೀತಾದಲ್ಲಿ ಸ್ಥಾನ ಪಡೆದುಕೊಳ್ಳಲಿ ಎಂದು ಹೇಳಿದರು.
ಮುಡಾದಲ್ಲಿ ಕೂಡ 16 ನಿವೇಶನ ತೆಗೆದುಕೊಂಡಿರುವುದು ಕೂಡ ಕಂಡುಬಂದಿದೆ. ಕಾನೂನಿನಲ್ಲಿ ಯಾವ ವರ್ಷದಲ್ಲಿ ಭೂಮಿ ಅಭಿವೃದ್ಧಿಯಾಗಿದೆಯೋ ಅಲ್ಲಿ ಭೂಮಿ ಕಳೆದುಕೊಂಡವರಿಗೆ ಹಣ ಹಾಗೂ ನಿವೇಶನ ಕಲ್ಪಿಸಬೇಕು. ಅದರ ಬದಲಾಗಿ ಹಿಂದೆ ಆಗಿರುವ ಲ್ಯಾಂಡ್ ಡೆವಲವ್‌ಮೆಂಟ್‌ನಲ್ಲಿ ಕೊಡಲು ಸಾಧ್ಯವಿಲ್ಲ. ನಾವು ಸರಿಇದ್ದೇವೆ ಎನ್ನುವುದಾದರೆ ಸಿಎಂ ಪ್ರಕರಣವನ್ನು  ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net