ವರದಿಗಾರರ ಕೂಟಕ್ಕೆ ನಾಗರಾಜ್ ಎಸ್. ಬಡದಾಳ್ ಸಾರಥ್ಯ

1000242102.jpg
Published on

ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದ, ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ನಾಗರಾಜ್ ಎಸ್.ಬಡದಾಳ್ ಚುನಾಯಿತರಾದರು.
ಏಕಾಂತಪ್ಪ ಅವರ ಅವಧಿ ನಂತರದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಆಯೋಜಿಸಿದ್ದ ಚುನಾವಣೆಯಲ್ಲಿ 74 ಮತಗಳನ್ನು ಪಡೆದ ನಾಗರಾಜ ಎಸ್. ಬಡದಾಳ್ 29 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇತರ ಸ್ಪರ್ಧಿಗಳಾಗಿದ್ದ ಪತ್ರಕರ್ತ ಡಾ. ವರದರಾಜ್ 45 ಹಾಗೂ ಪತ್ರಿಕೋದ್ಯಮಿ ಆ. ರವಿ 36 ಮತ ಪಡೆದರು.
ವರದಿಗಾರರ ಕೂಟದ 164 ಸದಸ್ಯರ ಪೈಕಿ 156 ಸದಸ್ಯರು ಮತ ಚಲಾಯಿಸಿದರು. ಇದರಲ್ಲಿ ಒಂದು ಮತ ತಿರಸ್ಕೃತಗೊಂಡಿತು.

ಮಧು ನಾಗರಾಜ್, ಎಚ್ಎಂಪಿ ಕುಮಾರ್ ಇತರೆ ಅಭ್ಯರ್ಥಿಗಳಿಗೆ ಬೆಂಬಲಿಸಿ ಕಣದಿಂದ ಹಿಂದೆ ಸರಿದರು.
ಚುನಾವಣಾಧಿಕಾರಿಯಾಗಿ ಮಲ್ಲಿಕಾರ್ಜುನ ಕಬ್ಬೂರು, ಸಹಾಯಕ ಚುನಾವಣಾಧಿಕಾರಿಯಾಗಿ ಡಿ. ರಂಗನಾಥರಾವ್ ಕಾರ್ಯ ನಿರ್ವಹಿಸಿದರು. ಹಿರಿಯ ಪತ್ರಕರ್ತರಾದ ಕೆ. ಏಕಾಂತಪ್ಪ, ಬಿ. ಎನ್. ಮಲ್ಲೇಶ್, ಜಿಎಂಆರ್ ಆರಾಧ್ಯ, ಎಂ. ಬಿ. ನವೀನ್, ಬಸವರಾಜ ದೊಡ್ಮನಿ, ಏಕಬೋಟೆ ಮಂಜುನಾಥ,  ವೀರಪ್ಪ ಎಂ. ಭಾವಿ, ಮಂಜುನಾಥ ಗೌರಕ್ಕಳವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net