ಬೆಸೆಯುವ ಸಂಸ್ಕೃತಿಗಳು ಅವಶ್ಯಕ

1000528240.jpg
Published on

ದಾವಣಗೆರೆ: ನಮಗಿಂದು ಶರಣ, ಸೂಫಿ ಮೊದಲಾಗಿ ಜನರನ್ನು ಬೆಸೆಯುವ ಸಂಸ್ಕೃತಿಗಳ ಅಗತ್ಯವಿದೆ ಎಂದು ಮೇಯರ್ ಕೆ.ಚಮನ್‌ಸಾಬ್ ಹೇಳಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಆಯೋಜಿಸಿದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕವಿತೆ, ಕವನಗಳಿಗೆ ಲೋಕದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಶರಣರು, ಸಂತರು, ದಾರ್ಶನಿಕರು, ಸೂಫಿಗಳ ಆದರ್ಶ ನಮ್ಮ ಜೀವನದಲ್ಲಿ ಅಳವಡಿಕೆಯಾಗಬೇಕು ಎಂದು ತಿಳಿಸಿದರು.
ಕರಾಳ ಶಕ್ತಿಗಳು ಇಂದು ವಿಜೃಂಭಿಸುತ್ತಿವೆ. ಸಂಸ್ಕೃತಿ, ಪ್ರೀತಿ, ಭ್ರಾತೃತ್ವ ಕಡಿಮೆಯಾಗಿದೆ. ನಮ್ಮಲ್ಲಿನ ಒಳ್ಳೆತನದ ಬದಲಾಗಿ ವ್ಯತ್ಯಾಸಗಳನ್ನು ಜನರು ಗುರುತಿಸುತ್ತಿದ್ದಾರೆ ಎಂದರು.
ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಕನ್ನಡ ಭಾಷೆಗೆ ಮೂಲವಾದ ಸಾಹಿತ್ಯ ಇತ್ತೀಚಿಗೆ ಕಡೆಗಣಿಸಲಾಗುತ್ತಿದೆ. ಸಾಹಿತಿಗಳ ಲೇಖನಿ ಸಮಾಜವನ್ನು ತಿದ್ದುವುದಷ್ಟೇ ಅಲ್ಲ, ಕಲುಷಿತ ರಾಜಕಾರಣವನ್ನು ತಿದ್ದುವಂತಾಗಬೇಕು ಎಂದರು.
ಚುಸಾಪ ಜಿಲ್ಲಾಧ್ಯಕ್ಷ ಗುಂಡಗಟ್ಟಿ ರಾಜಶೇಖರ, ಕನ್ನಡಪರ ಹೋರಾಟಗಾರ, ಕೆ.ಜಿ.ಶಿವಕುಮಾರ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಓಂಕಾರಯ್ಯ ತವನಿಧಿ, ಅನ್ನಪೂರ್ಣ ರವಿ, ಉಮಾ ಹಿರೇಮಠ, ಎಂ.ಬಸವರಾಜ, ಕಲೀಂ ಭಾಷಾ, ಅಣಬೇರು ತಾರೇಶ, ಮಂಜುನಾಥ, ಸುಶೀಲ ಹಿರೇಮಠ, ಪಕ್ಕಿರೇಶ ಆದಾಪುರ, ಚನ್ನಬಸವ ಶೀಲವಂತ್, ಶಿವಯೋಗಿ ಹಿರೇಮಠ, ಲಲಿತಕುಮಾರ ಜೈನ್, ಸತ್ಯಭಾಮ ಮಂಜುನಾಥ, ನೂರ್ ಜಾನ್, ಜಿ.ಕೆ.ಕುಲಕರ್ಣಿ ಭಾಗವಹಿಸಿದ್ದರು.
……

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net