ಪಂಚಮಸಾಲಿ ಮಹಿಳಾ ಘಟಕದಿಂದ ದೇವಿ ಪೂಜೆ

dvg-panchamasali-16.jpg
Published on

ದಾವಣಗೆರೆ : ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕ ಮತ್ತು ಎಲ್ಲ ಘಟಕಗಳ ಸಯೋಗದೊಂದಿಗೆ ನವರಾತ್ರಿಯ ಪ್ರಯುಕ್ತ ನಗರದ ಪಿ.ಜೆ. ಬಡಾವಣೆಯ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ಸೋಮವಾರ ದೇವಿ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
 ಕಾರ್ಯಕ್ರಮವನ್ನು ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಎಂ. ದೊಡ್ಡಪ್ಪ, ವಾಣಿ ಶಿವಣ್ಣ, ಬಾದಾಮಿ ಕರಬಸಪ್ಪ, ಎಸ್. ಮಲ್ಲಿನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಕಾಶಿನಾಥ್, ಮಹಿಳಾ ಘಟಕದ ಮೀನಾ ಅಣಪೂರ, ವೀಣಾ ನಟರಾಜ್  ಬೆಳ್ಳೂಡಿ, ಪಾರ್ವತಿ ಶಿವಕುಮಾರ್ ಮತ್ತಿಹಳ್ಳಿ, ರಶ್ಮಿ ನಾಗರಾಜ್ ಕುಂಕೋದ್ ಸೇರಿ ಎಲ್ಲ ಘಟಕಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net