

ದಾವಣಗೆರೆ: ಪೇಟಿಎಂ ಮನಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ನಂಬಿಸಿದ ವಂಚಕರು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ 52.30 ಲಕ್ಷ ರೂ. ವಂಚನೆ ಮಾಡಿದ್ದಾರೆ.
ನಗರದ ಆಂಜನೇಯ ಬಡಾವಣೆ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್ ಎಲ್.ಆರ್. ಲಕ್ಷ್ಮಣನಾಯ್ಕ ಮೋಸ ಹೋದವರು.
ಪೇಟಿಎಂ ಮನಿ ಜಿ-7 ಹೆಸರಿನ ವಾಟ್ಸಾೃಪ್ ಗ್ರೂಪ್‌ಗೆ ಲಕ್ಷ್ಮಣನಾಯ್ಕ ಅವರ ಮೊಬೈಲ್ ನಂಬರನ್ನು ಸೇರಿಸಿಕೊಂಡ ಅಪರಿಚಿತರು, ತಮ್ಮ ಕಂಪನಿಗೆ ಹಣ ಹೂಡಿದರೆ ಹೆಚ್ಚಿನ ಲಾಭ ಬರುವುದಾಗಿ ನಂಬಿಸಿದ್ದಾರೆ. ಕಳಿಸಿದ ಲಿಂಕ್‌ನಡಿ ಖಾತೆ ಆರಂಭಿಸಿದ್ದಾರೆ.
ನಂತರ ನಾವು ನೀಡುವ ಸೆಬಿ ಖಾತೆಗೆ ಹಣ ಹಾಕುವಂತೆ ಹೇಳಿ ಅ.24ರಿಂದ ಸೆ. 22ರವರೆಗೆ ನಿರಂತರವಾಗಿ ಒಟ್ಟು ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು 52.30 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವಿತ್‌ಡ್ರಾ ಮಾಡಿಕೊಳ್ಳಲು ಸಹ ಕಮಿಷನ್ ನೀಡುವಂತೆಯೂ ಹೇಳಿದ್ದಲ್ಲದೆ ಮತ್ತೆ ಹಣ ಹಾಕುವಣತೆಯೂ ಬೆದರಿಸಿದ್ದಾರೆ. ಈ ಸಂಬಂಧ ಸೆ. 30ರಂದು ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.