ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ ಪೊಲೀಸರು

1000627463.jpg
Published on

ದಾವಣಗೆರೆ: ಹೆದ್ದಾರಿ ಮಧ್ಯೆ ವಾಹನಗಳಿಗೆ ಎದುರಾಗಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ, ರಾಣೆಬೆನ್ನೂರು ತಾಲೂಕು ಗುತ್ತಲ ಗ್ರಾಮದ ಮಾನಸಿಕ ಅಸ್ವಸ್ಥ ಯುವತಿಯನ್ನು ರಕ್ಷಣೆ ಮಾಡಿದ್ದ ಹೊಯ್ಸಳ ವಾಹನ ಸಿಬ್ಬಂದಿ, ಮಂಗಳವಾರ ಪಾಲಕರಿಗೆ ಒಪ್ಪಿಸಿದ್ದಾರೆ.
ಹೊರವಲಯದ ಎಚ್. ಕಲಪನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಚರಿಸುತ್ತಿದ್ದ ಯುವತಿಯನ್ನು ಹೊಯ್ಸಳ ವಾಹನದಲ್ಲಿದ್ದ ದಾವಣಗೆರೆ ಗ್ರಾಮಾಂತರ ಠಾಣೆಯ ಸಿಬ್ಬಂದಿ ಮಂಜುನಾಥ ನಾಯ್ಕ, ವೀರೇಶ್, ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಮಾಡಿದ್ದಾರೆ.
ತಾನು ಗುತ್ತಲ ಗ್ರಾಮದವಳಾಗಿದ್ದು, ಗಲಾಟೆ ಮಾಡಿಕೊಂಡು ಬೇಸರದಿಂದ ಮನೆ ಬಿಟ್ಟು ಬಂದಿದ್ದಾಗಿ ಪೊಲೀಸರಿಗೆ ಯುವತಿ ಉತ್ತರಿಸಿದ್ದಾಳೆ. ಅತ್ತ ಗುತ್ತಲ ಠಾಣೆಗೆ ಬಂದ ಪಾಲಕರು, ಮಾನಸಿಕ ಅಸ್ವಸ್ಥೆಯಾದ ಮಗಳು ಕಾಣೆಯಾಗಿದ್ದು ದೂರು ನೀಡಲು ಮುಂದಾಗಿದ್ದರು.
ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರ ಸಂಪರ್ಕದ ಬಳಿಕ ಯುವತಿಯನ್ನು ರಾಮಗೊಂಡನಹಳ್ಳಿಯ ಬಾಲಕಿಯರ ಮಂದಿರದಲ್ಲಿರಿಸಿ, ಮಂಗಳವಾರ ಪಾಲಕರ ವಶಕ್ಕೆ ಒಪ್ಪಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net