ಅಲೆಮಾರಿ ಸಮಾಜಕ್ಕೆ ಧನಸಹಾಯ ನೀಡಲು ಮನವಿ

Davanagere Davangere, Mayakonda, Handicap, alemari Samaja, memorandum
Published on

ದಾವಣಗೆರೆ: ಬೀದಿ ಬದಿ ವ್ಯಾಪಾರಿಗಳು ಮತ್ತು ಕೈಕಸುಬು ಮಾಡುವವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಧನಸಹಾಯ, ಸಾಲ ಸೌಲಭ್ಯ ಕಲ್ಪಿಸಿಕೊಡುವಂತೆ ದಾವಣಗೆರೆ ಹಂಡಿಜೋಗಿ ಅಲೆಮಾರಿ ಸಮಾಜ ಸಂಘ ಆಗ್ರಹಿಸಿದೆ.

ಸಂಘದ ಮುಖಂಡರು ಈ ಕುರಿತು ಮಾಯಕೊಂಡ ಶಾಸಕ ಪ್ರೊ.ಎನ್. ಲಿಂಗಣ್ಣ ಮತ್ತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಂಘದ ಮುಖಂಡರಾದ ಎಸ್. ವೆಂಕಟೇಶ್, ಕೃಷ್ಣಮೂರ್ತಿ, ಅರುಣ್‌ಕುಮಾರ್ ಕೆ, ಮಂಜಪ್ಪ, ಮಂಜು, ರೇವಣಸಿದ್ದಪ್ಪ ಇದ್ದರು.

ಮಾಯಕೊಂಡ ಶಾಸಕ ಪ್ರೊ. ಎನ್. ಲಿಂಗಣ್ಣ ಜಿಲ್ಲಾಧಿಕಾರಿಗೆ ಪತ್ರ ಬರೆದು, ಈ ಫಲಾನುಭವಿಗಳನ್ನು ಪರಿಶೀಲಿಸಿ ಸರ್ಕಾರದ ನಿಯಮಾನುಸಾರ ಧನಸಹಾಯ ನೀಡುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net