ಅಪರಾಧಿಗಳಿಬ್ಬರಿಗೆ ಜೀವಾವಧಿ ಸಜೆ

1000001994.jpg
Published on

ದಾವಣಗೆರೆ: ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಸೇರಿ ಇಬ್ಬರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಹಾಗೂ  ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಚನ್ನಗಿರಿ ತಾಲೂಕಿನ ವಿ. ಬನ್ನಿಹಟ್ಟಿ ಗ್ರಾಮದ ಕುಸುಮಾ (ಪುಷ್ಪ್ಪಾ) ಹಾಗೂ ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಕೆರೆಬಿಳಚಿ ಗ್ರಾಮದ ಪ್ರಭು ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಲೋಕೇಶ್ ಮತ್ತು ಪತ್ನಿ ಕುಸುಮಾ ನಡುವೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಕೆಲ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗ್ರಾಮಸ್ಥರು, ಸಂಬಂಧಿಕರು ದಂಪತಿಗೆ ಬುದ್ದಿವಾದ ಹೇಳಿದ್ದರೂ ಗಲಾಟೆ ನಿರಂತರವಾಗಿತ್ತು. ಈ ನಡುವೆ ಪ್ರಭು ಎಂಬಾತನ ಜತೆ ಕುಸುಮಾ ಅಕ್ರಮ ಸಂಬಂಧ ಹೊಂದಿದ್ದು ಈ ವಿಚಾರ ತಿಳಿದಿದ್ದ ಪತಿಯನ್ನು 2021ರ ಜುಲೈ 27ರಂದು ವೇಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ದೃಢವಾಗಿತ್ತು. ಪೊಲೀಸ್ ನಿರೀಕ್ಷಕ ಪಿ.ಬಿ.ಮಧು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ  ಅಣ್ಣಯ್ಯ ಅವರು ಶನಿವಾರ, ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು. ಸರ್ಕಾರಿ ಅಭಿಯೋಜಕ  ಕೆ.ಎಸ್. ಸತೀಶ್‌ಕುಮಾರ್ ಸರ್ಕಾರದ ಪರ ವಕಾಲತ್ತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net