ಕಾಣದಂತೆ ಮಾಯವಾದನು 31ರಂದು ತೆರೆಗೆ

dvg kanadante mayavadanu jan 20
Published on

ದಾವಣಗೆರೆ: ಹಾರರ್ ಮತ್ತು ಕಾಮಿಡಿ ಸಂಗಮವಾದ ‘ಕಾಣದಂತೆ ಮಾಯವಾದನು’ ಚಿತ್ರ ಜ. 31 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರದ ನಾಯಕ ವಿಕಾಸ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ ಪತ್ತಿಪಾಠಿ ನಿರ್ದೇಶನದ ಚಿತ್ರದಲ್ಲಿ ಪ್ರೀತಿ, ತ್ಯಾಗ, ದ್ವೇಷ, ಅಸೂಯೆ, ಸಾಹಸ ಎಲ್ಲ ರೀತಿಯ ಅಂಶಗಳಿವೆ. ನಾಯಕನ ಆತ್ಮ ತನ್ನನ್ನು ಕೊಂದವರ ವಿರುದ್ಧ ಹೇಗೆ ಉಪಾಯವಾಗಿ ಸೇಡು ತೀರಿಸಿಕೊಳ್ಳುತ್ತದೆ ಎಂಬುದನ್ನು ಅದ್ಭುತವಾಗಿ ತೋರಿಸಲಾಗಿದೆ ಎಂದರು.

ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರದ ನಂತರ ಈ ಸಿನಿಮಾ ಆರಂಭಿಸಲಾಗಿತ್ತು. ಈ ಚಿತ್ರದಲ್ಲಿ ನಟಿಸಿದ್ದ ಉದಯ್ ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ಮೃತಪಟ್ಟ ಕಾರಣ ಚಿತ್ರೀಕರಣ ನಿಲ್ಲಿಸಲಾಗಿತ್ತು.

ಈ ಚಿತ್ರದ ಮೊದಲಾರ್ಧ ಉದಯ್ ಕಾಣಿಸಿಕೊಂಡಿದ್ದಾರೆ. ಉಳಿದ ಭಾಗವನ್ನು ಭಜರಂಗಿ ಲೋಕಿ ಅಭಿನಯಿಸಿದ್ದಾರೆ. ಉದಯ್ ಅವರ ಕೊನೆಯ ಚಿತ್ರ ಇದಾಗಿದೆ ಎಂದು ಹೇಳಿದರು.

ನಾಯಕಿ ಸಿಂಧೂ ಲೋಕನಾಥ್ ಮಾತನಾಡಿ, ಚಿತ್ರದಲ್ಲಿ ನಾನು ಎನ್‌ಜಿಒನಲ್ಲಿ ಕೆಲಸ ಮಾಡುವ ವಂದನಾ ಎಂಬ ಪಾತ್ರ ಮಾಡಿದ್ದೇನೆ. ನಾಯಕನೊಂದಿಗೆ ಪ್ರೇಮದ ವಿಚಾರ ಹೇಳಿಕೊಳ್ಳುವ ಹೊತ್ತಿಗೆ ಕೊಲೆ ಆಗುತ್ತದೆ. ಅದೇ ಅಂಶದ ಮೇಲೆ ಚಿತ್ರಕಥೆ ಸಾಗುತ್ತದೆ. ಕನ್ನಡಿಗರು ಸಿನಿಮಾ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net