ಮನೆ ಮತದಾನಕ್ಕೆ ಹಿರಿಯರ ನವೋತ್ಸಾಹ  ಮೊದಲ ದಿನವೇ 1913 ಮಂದಿ ಹಕ್ಕು ಚಲಾವಣೆ

1000093866.jpg
Published on

ದಾವಣಗೆರೆ: ಎಂಬತ್ತೈದು ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ವಿಕಲಾಂಗರಿಗೆ ಚುನಾವಣಾ ಆಯೋಗದ ಸೂಚನೆಯಂತೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನ ಕಾರ್ಯ ಜಿಲ್ಲಾದ್ಯಂತ ಗುರುವಾರ ಶುರುವಾಗಿದೆ. ಮೊದಲ ದಿನ 1913 (ಶೇ.85.42) ಮಂದಿ ಹಕ್ಕು ಚಲಾಯಿಸಿದರು.ಕೆಲ ದಿನಗಳ ಹಿಂದಷ್ಟೇ ಬಿಎಲ್‌ಒಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಇಆರ್‌ಒ ಅಂತರ್ಜಾಲದಲ್ಲಿ ನೋಂದಣಿ ಮಾಡಿಸಿ ನಮೂನೆ 12ಡಿ ರಡಿ ಘೋಷಣಾಪತ್ರ ಪಡೆದು ಮಾರ್ಕ್ ಮಾಡಿದ್ದರು. ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮತದಾನ ಅಧಿಕಾರಿ, ಮೈಕ್ರೋ ಅಬ್ಸರ್‌ವರ್, ವಿಡಿಯೋಗ್ರಾಫರ್ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಿತು.ಮತ ಪೆಟ್ಟಿಗೆ, ಚುನಾವಣಾ ಚಿಹ್ನೆಯುಳ್ಳ ರೊಟ್ಟಿನ ಬಾಕ್ಸ್, ಬ್ಯಾಲೆಟ್ ಪೇಪರ್, ಕೈಬೆರಳಿಗೆ ಹಾಕುವ ಶಾಯಿ, ಮತದಾರರ ಪಟ್ಟಿಯೊಂದಿಗೆ ದಾವಿಸಿದ್ದ ಚುನಾವಣಾ ಸಿಬ್ಬಂದಿ ಮತದಾನ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಿ ಮತ ಪೆಟ್ಟಿಗೆಯೊಳಗೆ ಮತ ಹಾಕಿಸಿಕೊಂಡರು.  ಮತಪತ್ರದಲ್ಲಿನ ಅಭ್ಯರ್ಥಿಗಳ ಪಟ್ಟಿ ಗಮನಿಸಿ, ನಿಮಗೆ ಇಷ್ಟವಾದವರ ಹೆಸರಿನ ಮುಂದಿನ ಖಾಲಿ ಜಾಗದಲ್ಲಿ ರೈಟ್ ಮಾರ್ಕ್ ಬರೆಯಿರಿ. ಎರಡು ಕಡೆ ಗುರುತು ಮಾಡದಿರುವಂತೆ ತಿಳಿವಳಿಕೆ ನೀಡಿದರು. ಗುರುತು ಮಾಡಿದ ಮತಪತ್ರವನ್ನು ಕವರ್ ಒಂದರಲ್ಲಿ ಇರಿಸಿ ಅಂಟಿಸಿ ಮತ ಪೆಟ್ಟಿಗೆಗೆ ಹಾಕುವ ಪ್ರಕ್ರಿಯೆ ನಡೆಸಲಾಯಿತು.ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಮನೆಯೊಂದರಲ್ಲಿ 90 ವರ್ಷದ ವಯೋವೃದ್ಧೆ ಸುಮತಿ ಎನ್. ಭಟ್, ವ್ಹೀಲ್‌ಚೇರ್‌ನಲ್ಲೇ ಕುಳಿತು ಮತ ಚಲಾಯಿಸಿದರು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹಾಗೂ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಮತದಾನ ಸಿಬ್ಬಂದಿ ಇದ್ದರು.ನರ ದೌರ್ಬಲ್ಯದಿಂದಾಗಿ ಬಲಗೈ ಹಾಗೂ ಬಲಗಾಲಿನ ಸ್ವಾಧೀನ ಕಳೆದುಕೊಂಡಿರುವ ಸುಮತಿ, ಕಳೆದ 15 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ವಾಕರ್‌ನೊಂದಿಗೆ ಸಂಚರಿಸುತ್ತಿದ್ದ ಇವರು ಎರಡು ತಿಂಗಳಿಂದ ವ್ಹೀಲ್‌ಚೇರ್ ಅಲವಂಬಿಸಿದ್ದಾರೆ. ಯಾವುದೇ ಚುನಾವಣೆಯಲ್ಲೂ ಮತದಾನ ತಪ್ಪಿಸಿಲ್ಲ ಎಂದು ಹೇಳುವ ಸುಮತಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಹಕ್ಕು ಚಲಾಯಿಸಿದ್ದರು.ನಿಜಲಿಂಗಪ್ಪ ಬಡಾವಣೆಯಲ್ಲಿ ವಿಕಲಾಂಗಿನಿ ವಿನೋದಾಬಾಯಿ ಎಂಬುವರ ಮನೆಗೆ ತೆರಳಿದ ತಂಡ, ಯಥಾಪ್ರಕಾರ ಮತದಾನ ಪ್ರಕ್ರಿಯೆ ನಡೆಸಿತು.

2262 ಮತದಾರರು

ಮನೆಯಿಂದಲೇ ಮತ ಚಲಾಯಿಸುವ ಸಂಬಂಧ ಜಿಲ್ಲೆಯಲ್ಲಿ ಒಟ್ಟು 2262 ಮತದಾರರು ನೋಂದಣಿಯಾಗಿದ್ದು ಈ ಪೈಕಿ ವಿಕಲಾಂಗರು 804, ಎಂಬತ್ತೈದು ವರ್ಷ ಮೇಲ್ಪಟ್ಟವರು 1458 ಮಂದಿ ಇದ್ದಾರೆ.----* ಕೋಟ್ನಾನು ಪ್ರತಿಬಾರಿ ತಪ್ಪದೇ ಮತದಾನ ಮಾಡಿದ್ದೇನೆ. ಸೊಸೆ ಅಥವಾ ಮಗನ ಜತೆ ಮತಕೇಂದ್ರಕ್ಕೆ ಹೋಗಿ ವೋಟ್ ಹಾಕಿರುತ್ತಿದ್ದೆ. ಮನೆಯಿಂದಲೇ ಮತ ಹಾಕಿದ್ದಕ್ಕೆ ಖುಷಿ ಎನಿಸುತ್ತದೆ. ಚುನಾವಣಾ ಆಯೋಗದ ಈ ಅವಕಾಶ ನಮ್ಮಂಥವರಿಗೆ ಅನುಕೂಲವಾಗಿದೆ.
ಸುಮತಿ ಎನ್. ಭಟ್
ಮತ ಚಲಾಯಿಸಿದ ವೃದ್ಧೆ
---
ಮತದಾನ ಮಾಡಿದವರು 

ಕ್ಷೇತ್ರ              ಹಿರಿಯರು ವಿಕಲಾಂಗರು ಜಗಳೂರು      181          102 ಹರಪನಹಳ್ಳಿ      142          68 ಹರಿಹರ           120          76 ದಾವಣಗೆರೆ(ಉ)235        104 ದಾವಣಗೆರೆ(ದ) 92        79 ಮಾಯಕೊಂಡ    15           6 ಚನ್ನಗಿರಿ            194         96 ಹೊನ್ನಾಳಿ          250        153-------------------ಒಟ್ಟು            1229       804-------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net