

ದಾವಣಗೆರೆ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಇತ್ತೀಚೆಗೆ ನಡೆದ ಕೋಮುಗಲಭೆ ವಿರೋಧಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಹಯೋಗದಲ್ಲಿ ಹಿಂದು ಪರ ಸಂಘಟನೆಗಳ ಮುಖಂಡರು ದಾವಣಗೆರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಭಗವಾಧ್ವಜ ಹಾಗೂ ಕೇಸರಿ ಶಾಲುಗಳೊಂದಿಗೆ ಬೀರಲಿಂಗೇಶ್ವರ ಮೈದಾನದಿಂದ ಹೊರಟ ಪ್ರತಿಭಟನಾಕಾರರು, ಉಪವಿಭಾಗಾಧಿಕಾ ಕಚೇರಿ ಎದುರಿನ ವೃತ್ತದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಮಾತನಾಡಿ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಹಿಂದುಳಿಗೆ ಎಚ್ಚರಿಕೆ ನೀಡಿ ಬಿ.ಸಿ. ರಸ್ತೆಗೆ ಕರೆಸಿದ್ದು ಸರಿಯಲ್ಲ ಎಂದು ಹೇಳಿದರು.
ದಾವಣಗೆರೆಯ ಗಾಂಧಿನಗರದಲ್ಲಿ ಸ್ಥಾವರದ ಮೇಲೆ ಭಗವಾಧ್ವಜ ಇಳಿಸಿದ ಬಳಿಕ, ಮತ್ತೊಂದು ಕೋಮಿನವರು ಅವರ ಧರ್ಮದ ಧ್ವಜ ಕಟ್ಟಿದ್ದು ಹಾಗೂ ಈದ್‌ಮಿಲಾದ್ ಮೆರವಣಿಗೆಯಲ್ಲಿ ಕೆಲವು ಷರ್ಟ್ ಮೇಲೆ ಪ್ಯಾಲೆಸ್ಟೈನ್ ರಾಷ್ಟ್ರದ ಸ್ಟಿಕ್ಕರ್ ಅಳವಡಿಸಿಕೊಂಡಿದ್ದು ಸರಿಯಲ್ಲ. ಇಂತಹ ರಾಷ್ಟ್ರದ್ರೋಹಿಗಳನ್ನು ರಾಷ್ಟ್ರಭಕ್ತ ಮುಸ್ಲಿಮರು ಹಿಡಿದು ಒಪ್ಪಿಸಬೇಕು ಎಂದು ಹೇಳಿದರು.
ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯುವಷ್ಟು ಹಿಂದುಗಳ ಮೇಲಿನ ದ್ವೇಷ ಯಾಕೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಮ ಮೆರವಣಿಗೆಗೆ ಹಿಂದುಗಳು ಸ್ವಾಗತಿಸಿವಂತೆಯೇ ಹಿಂದುಗಳ ಹಬ್ಬದಲ್ಲೂ ಮುಸ್ಲಿಮರೂ ಸ್ವಾಗತಿಸಬೇಕು. ಅದರ ಬದಲಾಗಿ ಮಕ್ಕಳ ಕೈಯಲ್ಲಿ ಕಲ್ಲೆಸೆವ ಹಾಗೂ ಗಲಾಟೆ ನಡೆಸುವುದಾದಲ್ಲಿ ಮಾಡಿದಲ್ಲಿ ಹಿಂದುಗಳು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗಣೇಶೋತ್ಸವ ಮೆರವಣಿಗೆಗಳು ಗಣೇಶೋತ್ಸವ ಸಮಿತಿ ಹೇಳಿದ ಮಾರ್ಗದಲ್ಲೇ ತೆರಳಬೇಕೆ ಹೊರತು ಮುಸ್ಲಿಂ ಧರ್ಮಗುರುಗಳು ಹೇಳಿದ ಕಡೆಗಲ್ಲ. ಮುಂದಿನ ದಸರಾ ಮಹೋತ್ಸವ ಮೆರವಣಿಗೆಯನ್ನು ವೆಂಕಟೇಶ್ವರ ವೃತ್ತದ ಬದಲಾಗಿ ಅರಳೀಮಠ ಆವರಣದಿಂದ ಆರಂಭವಾಗಲಿದೆ. ಮುಸ್ಲಿಂ ಸಮಾಜದ ಜತೆಗೆ ಪೊಲೀಸು ಸಹಕಾರ ನೀಡಬೇಕು. ಇಲ್ಲವಾದಲ್ಲಿ ಹಿಂದು ಸಮಾಜದ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದರು.
ಕಾರ್ಲ್‌ಮಾರ್ಕ್ಸ್ ನಗರದ ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ್ದನ್ನು ಸಮಿತಿ ಖಂಡಿಸಿದೆ. ಇಲಾಖೆಯು ಕೂಡಲೆ ಆಓಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಮುಖಂಡರಾದ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಬಿ.ಬಿ.ಅಜಯಕುಮಾರ್, ಮಂಜಾನಾಯ್ಕ, ವೈ. ಮಲ್ಲೇಶ್, ಎಸ್,ಟಿ. ಸುರೇಶ್, ರಾಜನಹಳ್ಳಿ ಶಿವಕುಮಾರ್, ಧನಂಜಯ ಕಡ್ಲೇಬಾಳ್, ಜೊಳ್ಳಿ ಗುರು, ವೈ. ಮಲ್ಲೇಶ್, ವೀರೇಶ್, ಅನಿಲ್,ಮಲ್ಲಿಕಾರ್ಜುನ್ ಅಣ್ಣಪ್ಪ, ಶ್ರೀನಿವಾಸ್, ಶಿವಾಜಿರಾವ್, ರಾನಡೆ ಶಂಭುಲಿಂಗಪ್ಪ ವೀರೇಶ್‌ಗೌಳಿ, ಪುನೀತ್ ರಾಜಶೇಖರ್. ಎನ್. ಲೋಕಿಕೆರೆ ನಾಗರಾಜ್, ಶಿವಕುಮಾರ್, ರಾಕೇಶ್, ನಾಗರಾಜ್ ಸುರ್ವೆ, ಚೇತನಾಬಾಯಿ, ಭಾಗ್ಯ ಪಿಸಾಳೆ ಮಂಜುನಾಥ್, ಗೌರಿ ಸತೀಶ್ ಇತರರಿದ್ದರು.