ಸಿದ್ದು ಜನ್ಮದಿನಕ್ಕೆ ದಾವಣಗೆರೆಯಲ್ಲಿ ಸಿಹಿ ತಿನಿಸು ಸಿದ್ಧತೆ

Davangere Former CM Siddaramaiah Birthday
Published on

ದಾವಣಗೆರೆ: ದಾವಣಗೆರೆಯಲ್ಲಿ ಆ. 3ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಸಮಾರಂಭಕ್ಕೆ ಬರುವ ಅಭಿಮಾನಿಗಳಿಗಾಗಿ ಅಪೂರ್ವ ಬ್ಯಾಂಕ್ವೆಟ್ ಸಭಾಂಗಣದಲ್ಲಿ 5 ಲಕ್ಷ ಮೈಸೂರು ಪಾಕ್ ತಯಾರಿಸಲಾಗುತ್ತಿದೆ.

ಬೆಂಗಳೂರಿನಿಂದ ಬಂದಿರುವ 1 ಸಾವಿರ ಬಾಣಸಿಗರು ಮೂರು ದಿನಗಳಿಂದ ತಯಾರಿಯಲ್ಲಿ ತೊಡಗಿದ್ದಾರೆ. ಇದರ ಜತೆಗೆ ಪಲಾವ್, ಮೊಸರನ್ನ ಮತ್ತು 5 ಲಕ್ಷ ಜನರಿಗೆ ಕುಡಿಯುವ ನೀರಿನ ಬಾಟಲಿಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಸಮಾರಂಭದ ಹಿಂದಿನ ದಿನ ರಾತ್ರಿ ದೂರದ ಊರುಗಳಿಂದ ರೈಲು, ಬಸ್ಸು ಇನ್ನಿತರ ವಾಹನಗಳಲ್ಲಿ ಬಂದು ತಂಗುವವರಿಗೆ ನಗರದ 7-8 ಕಲ್ಯಾಣ ಮಂಟಪಗಳಲ್ಲಿ ಅನ್ನ, ಸಾಂಬಾರ್, ಪಾಯಸ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗದಗ, ರೋಣದಿಂದ ಅಭಿಮಾನಿಗಳು 20 ಸಾವಿರ ಲಾಡುಗಳು ತಯಾರಿಸಿ ತರಲಿದ್ದಾರೆ. ವಿಜಯಪುರ, ಕಲಬುರಗಿಯಿಂದ ರೊಟ್ಟಿಗಳು ಬರಲಿವೆ, ಕೆಲವರು ಅಕ್ಕಿಯನ್ನು ತರಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ರಾಜಕುಮಾರ್ ತಿಳಿಸಿದರು. ಸಮಾರಂಭ ನಡೆಯಲಿರುವ ದಾವಣಗೆರೆಯ ಬೈಪಾಸ್ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಅರಮನೆ ಮೈದಾನದಲ್ಲಿ 3 ಕಡೆಗಳಲ್ಲಿ ಊಟದ ವ್ಯವಸ್ಥೆಗಾಗಿ 1 ಸಾವಿರ ಕೌಂಟರ್‌ಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net