ಧ್ವಜ ಕಟ್ಟುವ ವಿಚಾರಕ್ಕೆ ವಾಗ್ವಾದ ಎಂಟು ಜನರ ವಿರುದ್ಧ ಪ್ರಕರಣ

1000377123_20240917005223391.jpg
Published on

ದಾವಣಗೆರೆ: ಮೊಬೈಲ್ ಸ್ಥಾವರದ ಮೇಲೆ ಧ್ವಜ ಕಟ್ಟುವ ವಿಚಾರದಲ್ಲಿ ಭಾನುವಾರ ನಡೆದಿದ್ದ ವಾಗ್ವಾದ ಹಿನ್ನಲೆಯಲ್ಲಿ ಎರಡು ಕೋಮಿನ ಒಟ್ಟು 8 ಮಂದಿ ವಿರುದ್ಧ ಆಜಾದ್‌ನಗರ ಠಾಣೆಯಲ್ಲಿ ಬಿಎನ್‌ಎಸ್‌ಎಸ್‌ನ 126ನೇ ಕಲಂನಡಿ ಎರಡು ಪಿಎಆರ್ (ಮುಂಜಾಗ್ರತಾ ಕ್ರಮವಾಗಿ ಭದ್ರತೆ) ಪ್ರಕರಣ ದಾಖಲಾಗಿವೆ.  
ಇಲ್ಲಿನ ಆಜಾದ್‌ನಗರ ಸಮೀಪದ ಮೊಬೈಲ್ ಸ್ಥಾವರದ ಮೇಲೆ ಉಭಯ ಕೋಮಿನವರು ಪ್ರತ್ಯೇಕ ಧ್ವಜ ಹಾರಿಸಿದ್ದರು. ಈ ಸಂಬಂಧ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಎರಡೂ ಧ್ವಜಗಳನ್ನು ತೆರವುಗೊಳಿಸಲಾಗಿದ್ದು ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net