

ದಾವಣಗೆರೆ: ರಾಜ್ಯದಲ್ಲೇ ಅತಿ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿರುವ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ನಡೆಯಲಿದ್ದು, 30 ಹುರಿಯಾಳುಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾಗಲಿದೆ.
ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ಕುಮಾರ್ ಕಣದಲ್ಲಿರುವ ಪ್ರಮುಖ ಹುರಿಯಾಳುಗಳು. ಇತರೆ 27 ಮಂದಿ ಸ್ವತಂತ್ರ ಉಮೇದುವಾರರು ಇಲ್ಲಿದ್ದಾರೆ.
ಹರಪನಹಳ್ಳಿ ಕ್ಷೇತ್ರ ಒಳಗೊಂಡಂತೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,09,244 ಮತದಾರರಿದ್ದಾರೆ. ಈ ಪೈಕಿ 8,51,990 ಪುರುಷರು, 8,57,117 ಮಹಿಳೆಯರು, 137 ಮಂದಿ ತೃತೀಯಲಿಂಗಿ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 563 ಮಂದಿ ಸೇವಾ ಮತದಾರರಿದ್ದಾರೆ. ಒಟ್ಟು 44,039 ಯುವ ಮತದಾರರು ಹಕ್ಕು ಚಲಾಯಿಸುವ ಉಮೇದಿನಲ್ಲಿದ್ದಾರೆ. ಕ್ಷೇತ್ರದಲ್ಲಿ 12,858 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ 23221 ಅಂಗವಿಕಲರಿದ್ದಾರೆ. ಇದರಲ್ಲಿ ಅರ್ಜಿ ಸಲ್ಲಿಸಿಯೂ ಕೆಲವರು ಈ ಹಿಂದೆ ಮನೆ ಮತದಾನದಲ್ಲಿ ಭಾಗಿಯಾಗಿದ್ದಾರೆ.
388 ಕ್ರಿಟಿಕಲ್ ಬೂತ್
ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 1946 ಮತಗಟ್ಟೆ ಸ್ಥಾಪಿಸಲಾಗಿದ್ದು ಈ ಪೈಕಿ 388 ಕ್ರಿಟಿಕಲ್, 11 ವಲ್ನರಬಲ್ ಮತಗಟ್ಟೆಗಳಿವೆ. 1141 ಮತಗಟ್ಟೆಗಳ ನೇರ ಮತದಾನ ಪ್ರಕ್ರಿಯೆ ಚಿತ್ರೀಕರಣದ ವೆಬ್ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದರಂತೆ ಒಟ್ಟು 35 ಸಖಿ, 7 ಯುವ ನಿರ್ವಹಣೆಯ ಮತಗಟ್ಟೆಗಳಿವೆ. ತಲಾ 7 ಸಾಂಪ್ರದಾಯಿಕ, ಧ್ಯೇಯ ಆಧಾರಿತ ಹಾಗೂ ವಿಕಲಾಂಗರ ಮತಗಟ್ಟೆ ಸೇರಿ 63 ವಿಶೇಷ ಬೂತ್ಗಳಿವೆ.
ಬಿಸಿಲಿನ ಪ್ರಖರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 7ರಿಂದ 8 ಕ್ಯಾನ್ ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆಗಾಗಿ 573 ಬೂತ್ ಆವರಣದಲ್ಲಿ ಶಾಮಿಯಾನ ಅಳವಡಿಸಲಾಗಿದೆ.
ವಿಕಲಾಂಗರಿಗೆ ವ್ಹೀಲ್ಚೇರ್ಗಳು, ಹಿರಿಯ ನಾಗರಿಕರನ್ನು ಮತಗಟ್ಟೆಗಳತ್ತ ಕರೆತರಲು ಆಟೋಗಳ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಸೂಕ್ತ ನಿರ್ವಹಣೆಗೆ ಬಿಎಲ್ಒ, ಎನ್ಎಸ್ಎಸ್, ಸ್ಕೌಟ್ಸ್-ಗೈಡ್ಸ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.
4680 ಬಿಯು ವ್ಯವಸ್ಥೆ
ಮತದಾನ ಹಿನ್ನೆಲೆಯಲ್ಲಿ ಒಟ್ಟು 4680 ಬ್ಯಾಲೆಟ್ ಯುನಿಟ್ಗಳ ಲಭ್ಯತೆ ಇದ್ದು 3892 ಅನ್ನು ಬಳಸಲಾಗುತ್ತಿದ್ದು 788 ಬಿಯು ಕಾಯ್ದಿರಿಸಲಾಗಿದೆ. ಒಟ್ಟು 2439 ಕಂಟ್ರೋಲ್ ಯುನಿಟ್ಗಳಿವೆ. ಈ ಪೈಕಿ 1946 ಮತಗಟ್ಟೆಗಳಿಗೆ ನೀಡಲಾಗಿದೆ. ಇತರೆ 493 ಮೀಸಲಿಡಲಾಗಿದೆ. 2575 ವಿವಿ ಪ್ಯಾಟ್ ಯಂತ್ರಗಳಿದ್ದು, ಇದರಲ್ಲಿ ಮತಗಟ್ಟೆಗೆ ತಲಾ ಒಂದರಂತೆ ಬಳಸಲಾಗುತ್ತಿದೆ. 629 ಅನ್ನು ಕಾಯ್ದಿರಿಸಲಾಗಿದೆ.
8996 ಸಿಬ್ಬಂದಿ,
ಮತದಾನ ಹಿನ್ನೆಲೆಯಲ್ಲಿ 2249 ಪಿಆರ್ಒ, 2249 ಎಪಿಆರ್ಒಗಳು, 4195 ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 8996 ಸಿಬ್ಬಂದಿ ನಿಯೋಜಿಸಲಾಗಿದೆ. 188 ಮೈಕ್ರೋ ಅಬ್ಸರ್ವರ್ಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲೆ ವ್ಯಾಪ್ತಿಯ ಏಳೂ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 1693 ಮತಗಟ್ಟೆಗಳ ಸಿಬ್ಬಂದಿ ತೆರಳಲು 190 ಬಸ್, 127 ಮಿನಿ ಬಸ್, 29 ಜೀಪ್ ಹಾಗೂ ಅಂಗವಿಕಲರ ಮತಗಟ್ಟೆಗೆ ತೆರಳಲು ವಿಕಲಾಂಗರಿಗೆ ವಿಶೇಷವಾಗಿ 7 ಇನ್ನೋವಾ ಕಾರು ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಭದ್ರತೆ
ಶಾಂತಿಯುತ ಚುನಾವಣೆಗಾಗಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 3 ಸಶಸ್ತ್ರ ಮೀಸಲು ತುಕಡಿ, 4 ಆರ್ಪಿಎಫ್ ತುಕಡಿ, 5 ಕರ್ನಾಟಕ ಮೀಸಲು ಪಡೆ, 7 ಡಿವೈಎಸ್ಪಿ, 950 ಮಂದಿ ಗೃಹರಕ್ಷಕರು, 2750 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
---
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ವಿವರ
-------------------------------
ವಿ. ಕ್ಷೇತ್ರ ಮತಗಟ್ಟೆ ಪುರುಷರು, ಸ್ತ್ರೀಯರು ಇತರೆ ಒಟ್ಟು
-------------------------------------
ಜಗಳೂರು 263 100046 98759 10 198815
ಹರಿಹರ 228 105510 106870 17 212397
ದಾ (ಉ ತ್ತರ) 245 124485 128635 36 253156
ದಾ (ದಕ್ಷಿಣ) 217 109184 111774 39 220997
ಮಾಯಕೊಂಡ 240 97759 97326 04 195089
ಚನ್ನಗಿರಿ 255 101653 102208 09 203870
ಹೊನ್ನಾಳಿ 245 100384 100560 03 200947
ಹರಪನಹಳ್ಳಿ 253 112969 110985 19 223973
----------------------------------------
ಒಟ್ಟು 1946 851990 857117 137 1709244
---------------------------------------