

ದಾವಣಗೆರೆ: ನಾಮದೇವ ಸಿಂಪಿ ಸಮಾಜದಿಂದ ನಗರದಲ್ಲಿ ನ.25 ರಿಂದ 27ರ ವರೆಗೆ 99ನೇ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ದೈವ ಮಂಡಳಿ ಅಧ್ಯಕ್ಷ ಎಂ.ಎಸ್. ವಿಠ್ಠಲ್ ಹೇಳಿದರು.
ಸೋಮವಾರ ಬೆಳಗ್ಗೆ 5 ಗಂಟೆಯಿಂದ ಕಾಕಡಾರತಿ ಭಜನೆ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿವೆ. ಸಂಜೆ 4 ಗಂಟೆಗೆ ಶ್ರೀ ವಿಠ್ಠಲ ಮಂದಿರದಿಂದ ನಾಮದೇವ ಭಜನಾ ಮಂದಿರಕ್ಕೆ ಪೋತಿ ತಂದು ಸ್ಥಾಪನೆ ಮಾಡಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5 ಕ್ಕೆ ಸಮಾಜದ ಹಿರಿಯ ಚೇತನಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಕೈಗಾರಿಕಾ ಪ್ರಕೋಷ್ಠ ರಾಜ್ಯ ಸಂಚಾಲಕ ಕೆ.ಬಿ. ಕೊಟ್ರೇಶ್, ಉಪನ್ಯಾಸಕ ಬಸವರಾಜ ಹನುಮಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಜೆ 6 ಕ್ಕೆ ಕೊಲ್ಲಾಪುರದ ತುಕಾರಾಂ ಗುರೂಜಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ನ.26 ರ ಬೆಳಗ್ಗೆ 9 ಕ್ಕೆ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ, 11ಕ್ಕೆ ಗಾಥಾ ಭಜನೆ ಮತ್ತು ಆರತಿ, ಮಧ್ಯಾಹ್ನ 3.30ಕ್ಕೆ ಪ್ರವಚನ, ಸಂಜೆ 4.30ಕ್ಕೆ ಶ್ರೀ ವಿಠ್ಠಲ ರುಕುಮಾಯಿ ಉತ್ಸವಮೂರ್ತಿ ಮೆರವಣಿಗೆ, ದೀಪೋತ್ಸವ ಹಾಗೂ ಕುಂಭೋತ್ಸವ, ರಾತ್ರಿ 8 ಗಂಟೆಗೆ ಕೀರ್ತನೆ, 11 ಗಂಟೆಯಿಂದ ಜಾಗರಣೆ, ಪಾವೂಲ್ ಭಜನೆ, ಬಾರೋಡ್ ಹಾಗೂ ಪಾಳಿ ಭಜನೆ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ನ.27 ರಂದು ನಗರದ ರಾಜನಹಳ್ಳಿ ಹನುಮಂತಪ್ಪನವರ ಧರ್ಮಶಾಲೆಯಲ್ಲಿ ಬೆಳಗ್ಗೆ 9 ರಿಂದ ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ಹಾಗೂ ವೇಷಭೂಷಣ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾಜದ ಪದಾಧಿಕಾರಿಗಳಾದ ಜ್ಞಾನದೇವ ಬೊಂಗಾಳೆ, ಮನೋಹರ ವಿ. ಬೊಂಗಾಳೆ, ಕೆ.ಜಿ. ಯಲ್ಲಪ್ಪ. ಅಶೋಕ ಮಾಳೋದೆ, ರಾಘವೇಂದ್ರ ಕಂಚಿಕೆರೆ ಸುದ್ದಿಗೋಷ್ಠಿಯಲ್ಲಿದ್ದರು.