60.23 ಕೋಟಿ ರೂ. ಬೆಳೆ ನಷ್ಟ ಪರಿಹಾರ ಬಿಡುಗಡೆ     ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ

DC_Venkatesh_DVG-1_20240510162517064.jpg
Published on

ದಾವಣಗೆರೆ: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟ ಹೊಂದಿದ 82,928 ರೈತರಿಗೆ ಮೊದಲ ಹಾಗೂ ಎರಡನೇ ಕಂತಿನಲ್ಲಿ ಒಟ್ಟು 60.23 ಕೋಟಿ ರೂ. ಪರಿಹಾರಧನ ರೈತರ ಖಾತೆಗೆ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
2023ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಅರ್ಹ ರೈತರಿಗೆ ಗರಿಷ್ಠ 2 ಸಾವಿರ ರೂ.ವರೆಗೆ 82,928 ರೈತರಿಗೆ ಮೊದಲ ಕಂತಾಗಿ 15,88,15,380 ರೂ.ಪಾವತಿಸಲಾಗಿತ್ತು.
ಮೇ 2 ರಂದು ಸರ್ಕಾರ ನೀಡಿದ ಆದೇಶದ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಬಾಕಿ ಇದ್ದ ಮೊತ್ತವನ್ನು ಪ್ರಸ್ತುತ ಜಿಲ್ಲೆಯ 69,575 ರೈತರಿಗೆ 44,35,31,000 ರೂ. ನೇರವಾಗಿ ಅವರ ಖಾತೆಗೆ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 60,23,46,381 ರೂ. ಬೆಳೆಹಾನಿ ಪರಿಹಾರವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಕಂತಿನ ವಿವರ: ಮೊದಲ ಕಂತಿನಲ್ಲಿ ಗರಿಷ್ಠ ರೂ.2000 ವರೆಗೆ ಮಾರ್ಗಸೂಚಿನ್ವಯ ಜಿಲ್ಲೆಯ 82928 ರೈತರಿಗೆ 15,88,15,380 ರೂ. ಪಾವತಿಸಲಾಗಿತ್ತು.
ತಾಲ್ಲೂಕುವಾರು ವಿವರ : ಚನ್ನಗಿರಿ ತಾಲೂಕಿನ 16,398 ರೈತರಿಗೆ 3,07,12,576 ರೂ, ದಾವಣಗೆರೆ 17,015 ರೈತರಿಗೆ 3,22,94,548 ರೂ, ಹೊನ್ನಾಳಿ 8,795 ರೈತರಿಗೆ 1,66,55,292 ರೂ, ಜಗಳೂರು 27,263 ರೈತರಿಗೆ 5,36,64,034 ರೂ, ನ್ಯಾಮತಿ 9,189 ರೈತರಿಗೆ 1,74,61,001 ರೂ. ಹಾಗೂ ಹರಿಹರ ತಾಲೂಕಿನ 4268 ರೈತರಿಗೆ 80,27,929 ರೂ. ಮೊದಲ ಕಂತಾಗಿ ಪಾವತಿಸಲಾಗಿದೆ.
ಬಾಕಿ ಇದ್ದ ಬೆಳೆ ಪರಿಹಾರ ಪಾವತಿ: ಜಿಲ್ಲೆಯಲ್ಲಿ ಬೆಳೆ ನಷ್ಟದ ಬಾಕಿ ಪಾವತಿಸಬೇಕಾದ 69,575 ರೈತರಿಗೆ 44,35,37,000 ರೂ. ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಈಗ ಪಾವತಿಸಲಾಗಿದೆ.
ತಾಲೂಕುವಾರು ವಿವರ : ಚನ್ನಗಿರಿ 12,758 ರೈತರಿಗೆ 6,50,30,311ರೂ, ದಾವಣಗೆರೆ 13,914 ರೈತರಿಗೆ 8,34,19,466 ರೂ, ಹೊನ್ನಾಳಿ 7,177 ರೈತರಿಗೆ 3,87,43,550 ರೂ, ಜಗಳೂರು 24493 ರೈತರಿಗೆ 19,29,18,592 ರೂ, ನ್ಯಾಮತಿಯ 8,025 ರೈತರಿಗೆ 4,58,94,470 ರೂ. ಹಾಗೂ ಹರಿಹರ ತಾಲೂಕಿನ 3,208 ರೈತರಿಗೆ 1,75,24,611 ರೂ. ಪಾವತಿಸಿದೆ.
ಯಾವುದೇ ರೈತರಿಗೆ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಮತ್ತು ಮಾರ್ಗಸೂಚಿ ಬಗ್ಗೆ ವಿವರ ನೀಡಲು ಎಲ್ಲ ತಾಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.
ಚನ್ನಗಿರಿ ತಾ. 7892481962, ದಾವಣಗೆರೆ 9731254380, ಹೊನ್ನಾಳಿ ತಾ. 9686136015, ಜಗಳೂರು ತಾ. 8431977870, ನ್ಯಾಮತಿ ತಾ. 8073951245 ಹಾಗೂ ಹರಿಹರ ತಾ. 8618868370 ಸಂಖ್ಯೆಗಳಿಗೆ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಮಾಹಿತಿಗೆ ಕರೆ ಮಾಡಬಹುದಾಗಿದೆ.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net