ಎಸ್‌ಎಸ್ ಕಪ್-2024 ಕ್ರಿಕೆಟ್ ಟೂರ್ನಿಗೆ ಚಾಲನೆ  ಏಳು ದಿನಗಳ ಹಬ್ಬದಲ್ಲಿ 32 ತಂಡಗಳು ಭಾಗಿ

1000175549_20240610231552766.jpg
Published on

ದಾವಣಗೆರೆ: ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ 94ನೇ ಜನ್ಮದಿನದ ನಿಮಿತ್ತ, ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಏಳು ದಿನಗಳ ಅವಧಿಯ ಎಸ್.ಎಸ್. ಕಪ್-2024 ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಚಾಲನೆಗೊಂಡಿತು.
ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಟೂರ್ನಿಯು ಲೀಗ್ ಕಂ ನಾಕೌಟ್ ಮಾದರಿಯದಾಗಿದೆ.
ಒಟ್ಟು 6 ವಿಭಾಗಗಳಲ್ಲಿ ಜಿಲ್ಲೆಯ ವಿವಿಧೆಡೆಗಳ 32 ತಂಡಗಳು ಭಾಗವಹಿಸಲಿವೆ. ಪ್ರತಿ ಪಂದ್ಯವೂ ಆರು ಓವರ್‌ಗೆ ಸೀಮಿತವಾಗಿದೆ. ವಿಜೇತ ತಂಡಗಳಿಗೆ ಕ್ರಮವಾಗಿ ಪ್ರಥಮ ಬಹುಮಾನವಾಗಿ 44,444 ರೂ, ದ್ವಿತೀಯ ಬಹುಮಾನವಾಗಿ 22,222 ರೂ. ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು.
ದೀಪ ಬೆಳಗುವ ಮೂಲಕ ಟೂರ್ನಿ ಉದ್ಘಾಟಿಸಿದ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಇಂದಿನ ಯುವಕರಿಗೆ ಆದರ್ಶವಾಗುವಂತೆ ಜೀವನ ನಡೆಸುತ್ತ ಬಂದಿದ್ದಾರೆ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪಂದ್ಯಾವಳಿ ಆಯೋಜಿಸಿ ಕ್ರೀಡೆಗೆ ಉತ್ತೇಜಿಸಲಾಗುತ್ತಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳ ಸಂಘದ ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ವೃತ್ತ ನಿರೀಕ್ಷಕ ಕಿಣ್‌ಕುಮಾರ್,  ಜಯಪ್ರಕಾಶ್‌ಗೌಡ, ಕುರುಡಿ ಗಿರೀಶ್, ಶ್ರೀನಾಥ್ , ಸುರೇಶ್, ಯತೀಶ್ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net