ನಿವೇಶನಕ್ಕಾಗಿ ಸ್ಲಂ ನಿವಾಸಿಗಳ ಪ್ರತಿಭಟನೆ

Davangere, slum, protest,
Published on

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಳೆಗೇರಿ ನಿವಾಸಿಗಳಿಗೆ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ಸ್ಲಂ ನಿವಾಸಿಗಳು ಶನಿವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಭೂಮಿ ಗುರುತಿಸಿ ನಿವೇಶನ ನೀಡುವಂತೆ ಒತ್ತಾಯಿಸಿದ ನಿವಾಸಿಗಳು ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿದರು.

ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಅತಿವೃಷ್ಟಿಯಿಂದಾಗಿ ಸ್ಲಂ ಜನ ಮೂಲ ಸೌಲಭ್ಯ ವಂಚಿತರಾಗಿದ್ದು, ಇದು ತಪ್ಪಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಅರ್ಹರಿಗೆ ನಿವೇಶನ ಕಲ್ಪಿಸಿ ಸಂವಿಧಾನದ ಆಶಯದಂತೆ ವಸತಿ ಹಕ್ಕಿಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡಿ, ಪಾಲಿಕೆ ವ್ಯಾಪ್ತಿಯ ವಿವಿಧ ಕೊಳೆಗೇರಿಗಳಲ್ಲಿ 500 ಬಡ ಕುಟುಂಬಗಳಿದ್ದು, ಎಲ್ಲರೂ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಈ ನಿರಾಶ್ರಿತರಿಗೆ ಹಿಂದಿನ ಜಿಲ್ಲಾಧಿಕಾರಿ 41 ಎಕರೆ ಭೂಮಿ ಖರೀದಿಸಿದ್ದಾಗಿ ತಿಳಿಸಿದ್ದರು. ಆ ಜಾಗದಲ್ಲಿ ಸ್ಲಂ ನಿವಾಸಿಗಳು ಮತ್ತು ಕಡುಬಡವರಿಗೆ ಸೈಟ್ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಗೌರವಾಧ್ಯಕ್ಷ ಎಂ.ಶಬ್ಬೀರ್ ಸಾಬ್, ಜಿಲ್ಲಾಧ್ಯಕ್ಷೆ ಸಾವಿತ್ರಮ್ಮ, ಪರ್ವೀನ್ ಬಾನು, ರಜಿಯಾ, ಮಂಜುಳಾ, ಆರೀಫ್, ಗೀತಮ್ಮ, ಬೀಬಿಜಾನ್, ಶಂಷುದ್ದೀನ್, ಜ್ಯೋತಿ, ರಾಜೇಶ್ವರಿ, ಶಂಷಿದ್ ಬಾನು, ರೇಷ್ಮಾ, ರೇಖಾ, ಯೂಸೂಫ್ ಸಾಬ್, ಚಮನ್‌ಸಾಬ್, ಸಲಾಂಸಾಬ್, ಸಿಕಂದರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net