ಕರೊನಾ ಓಡಿಸಲು ದುರ್ಗಾಂಬೆಗೆ ಪೂಜೆ

dvg pooje may 12
ಕರೊನಾ ನಿರ್ಮೂಲನೆಗೆ ಮಂಗಳವಾರ ದಾವಣಗೆರೆಯಲ್ಲಿ ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ನಡೆಸಲಾಯಿತು. ಡಾ.ಪ್ರಭಾ ಎಸ್‌ಎಸ್ ಮಲ್ಲಿಕಾರ್ಜುನ, ರೇಖಾ ಗಣೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ದೇವಸ್ಥಾನದ ಟ್ರಸ್ಟಿ ಅಥಣಿ ವೀರಣ್ಣ ಇತರರಿದ್ದರು.
Published on

ದಾವಣಗೆರೆ: ಕರೊನಾ ಹೆಮ್ಮಾರಿ ನಿರ್ಮೂಲನೆ ಮಾಡುವಂತೆ ಪ್ರಾರ್ಥಿಸಿ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬ ಸದಸ್ಯರು, ಜಿಲ್ಲಾಡಳಿತ ಹಾಗೂ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಸದಸ್ಯರು ಮಂಗಳವಾರ ನಗರದೇವತೆ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ, ಅಭಿಷೇಕ ಮಾಡಿಸಿದರು.
ಡಾ.ಪ್ರಭಾ ಎಸ್‌ಎಸ್ ಮಲ್ಲಿಕಾರ್ಜುನ, ರೇಖಾ ಗಣೇಶ್, ದಿ.ಶಾಮನೂರು ಬಸವರಾಜಪ್ಪನವರ ಕುಟುಂಬ ವರ್ಗ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ದೇವಸ್ಥಾನದ ಟ್ರಸ್ಟಿಗಳಾದ ಅಥಣಿ ವೀರಣ್ಣ ಇತರರು ಪೂಜೆ ಸಲ್ಲಿಸಿ ಕರೊನಾ ಓಡಿಸುವ ಸಂಕಲ್ಪ ಮಾಡಿದರು.
ಟ್ರಸ್ಟಿಗಳಾದ ಹನುಮಂತರಾವ್ ಸಾವಂತ್, ಗೌಡ್ರ ಚನ್ನಬಸಪ್ಪ, ಎಚ್.ಬಿ. ಗೋಣೆಪ್ಪ, ಜೆ.ಕೆ. ಕೊಟ್ರಬಸಪ್ಪ, ಉಮೇಶ್ ಸಾಳಂಕಿ, ಎಸ್.ಎಂ.ಗುರುರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net