ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಕಾಂಗ್ರೆಸ್ ಬೆಂಬಲ

1000101897.jpg
Published on

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾವು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ಸೂಚಿಸಲಿದೆ ಎಂದು ಮಹಾಸಭಾ ಗೌರವಾಧ್ಯಕ್ಷ ಡಿ. ತಿಪ್ಪಣ್ಣ ಹೇಳಿದರು.
ತಳ ಸಮುದಾಯದ ಶ್ರೇಯೋಭಿವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಯುಪಿಎ ಸರ್ಕಾರವು ರಾಷ್ಟ್ರೀಯ ಅಲೆಮಾರಿ ಆಯೋಗವನ್ನು ರಚಿಸಿದೆ. ಕಾಂಗ್ರೆಸ್ ಬೆಂಬಲಿಸಲು ರಾಜ್ಯಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಶಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳಸಮುದಾಯದ ಅಧ್ಯಯನಕ್ಕೆ ಕೋಶ ರಚಿಸಿದ್ದಾರೆ. ಅಲ್ಲದೇ ಅಲೆಮಾರಿ ನಿಗಮವನ್ನು ಸ್ಥಾಪಿಸಿ  ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸವಲತ್ತುಗಳನ್ನು ತಲುಪಿಸುತ್ತಿದ್ದಾರೆ. ಸಿ.ಎಸ್.ದ್ವಾರಕನಾಥ್ ಅವರ ಸಲಹೆಯಂತೆ ಮಹಾಸಭಾದ ಸದಸ್ಯರು ಒಮ್ಮತದಿಂದ ಬೆಂಬಲ ಘೋಷಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಎಸ್.ವಿ.ಮಂಜಪ್ಪ, ಕೋಶಾಧ್ಯಕ್ಷ ಕೆ.ಪಿ.ಸಿದ್ದಪ್ಪ, ಸಂಘಟನಾ ಕಾರ್ಯದರ್ಶಿ ಡಿ.ಕುಮಾರ್, ಸದಸ್ಯ ಪ್ರದೀಪ್ ಜರೀಕಟ್ಟೆ, ಚಿತ್ರಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net