ಟೇಕಾಫ್ ಆಗದ ಕಾಂಗ್ರೆಸ್ ಸರ್ಕಾರ

1000763995.jpg
Published on

ದಾವಣಗೆರೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಹುಬ್ಬಳಿಯಲ್ಲಿ ನೇಹಾ, ಹಾವೇರಿಯಲ್ಲಿ ಸ್ವಾತಿ ಲವ್‌ಜಿಹಾದ್‌ಗೆ ಬಲಿಯಾಗಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದರೂ ಸರ್ಕಾರ ಮೌನವಾಗಿದೆ. ಸರ್ಕಾರದ ಕರಿಮಣಿ ಮಾಲೀಕ ಯಾರೆಂದು ಪ್ರಶ್ನೆ ಮಾಡುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಅಲ್ಪಸಂಖ್ಯಾತರ ಪರ ರಾಜ್ಯ ಬಜೆಟ್ ಮಂಡಿಸಲಾಗಿದ್ದು, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ಮೀಸಲು ಕಲ್ಪಿಸಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಕೂಡಲೆ ಈ ಮೀಸಲನ್ನು ಹಿಂಪಡೆಯುತ್ತೇವೆ ಎಂದರು.

ರಾಮನಗರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತುವರಿ ಭೂಮಿ ತೆರವು ವಿಚಾರಕ್ಕೆ ಪ್ರಕ್ರಿಯಿಸಿದ ರೇಣುಕಾಚಾರ್ಯ, ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ.

ಕಾಂಗ್ರೆಸ್ ಮುಖಂಡರ ಇತಿಹಾಸ ತೆಗೆದರೆ ಎಲ್ಲ ಒತ್ತುವರಿ ಬಯಲಾಗಲಿದೆ. ಎಂಬಿ.ಪಾಟೀಲ್ ಸೇರಿ ಕೆಲವು ಸಚಿವರು ಭೂ ಒತ್ತುವರಿ ಮಾಡಿದ್ದಾರೆ ಎಂದು ದೂರಿದರು.

ಸೋತು ಸುಣ್ಣವಾಗಿದ್ದ ಯತ್ನಾಳ್‌ರನ್ನು ಯಡಿಯೂರಪ್ಪ ಅವರು ವಿಜಯಪುರಕ್ಕೆ ಕರೆತಂದು ಟಿಕೆಟ್ ಕೊಡಿಸಿದ್ದಕ್ಕೆ ಗೆಲ್ಲುತ್ತ ಬಂದಿದ್ದಾರೆ. ಎನ್‌ಆರ್‌ಐ ಅತಿಥಿಗೃಹದಲ್ಲಿ ಯತ್ನಾಳ್ ಯಾರ ಕಾಲಿಗೆ ಬೀಳುತ್ತಿದ್ದಾರೆ ಎಂಬುದು ಗೊತ್ತಿದೆ. ಅವರನ್ನು ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net