ಜಿಲ್ಲಾ ಕಾಂಗ್ರೆಸ್ ನಿಂದ ಅಂಬೇಡ್ಕರ್ ಜಯಂತ್ಯುತ್ಸವ

IMG-20240414-WA0108.jpg
Published on

ದಾವಣಗೆರೆ: ಮಹಿಳೆಯರಿಗೂ ಸಂವಿಧಾನದಲ್ಲಿ ಪ್ರಾತಿನಿಧ್ಯ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಚಿರಸ್ಮರಣೀಯರು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು, ಅನ್ಯ ರಾಷ್ಟ್ರಗಳಿಗೂ ಪ್ರೇರಣೆಯಾಗುವಂತಹ ಶ್ರೇಷ್ಠ ಸಂವಿಧಾನ ನೀಡಿರುವುದು ಭಾರತದ ಹೆಮ್ಮೆಯಾಗಿದೆ. ಇದರ ಮೂಲಕ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಅಂಬೇಡ್ಕರ್‌ರವರು ಪ್ರತಿಪಾದಿಸಿದ ಸಂವಿಧಾನ ಇಂದಿನ ಹಾಗೂ ಮುಂಬರುವ ಎಲ್ಲಾ ಪೀಳಿಗೆಗೂ ಸ್ಫೂರ್ತಿದಾಯಕ. ಅಂಬೇಡ್ಕರ್ ಅವರ ಕೊಡುಗೆ ಮತ್ತು ಪರಂಪರೆ ಭಾರತದ ಇತಿಹಾಸದ ಒಂದು ಭಾಗವಾಗಿರದೆ ನ್ಯಾಯಯುತ ಸಮಾಜದ ಕಡೆಗೆ ನಮ್ಮನ್ನು ಮಾರ್ಗದರ್ಶಿಸುವ ದಾರಿದೀಪವಾಗಿದೆ ಎಂದು ಹೇಳಿದರು.
ಸುಸ್ಥಿರ ಸಂವಿಧಾನಕ್ಕಾಗಿ ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಒಂದುಗೂಡಬೇಕಿದೆ. ಪ್ರತಿ ವ್ಯಕ್ತಿಯ ಘನತೆ ಮತ್ತು ಗೌರವದಿಂದ ಕಾಣುವ ಸಮಾಜದ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎಸ್ಟಿ ವಿಭಾಗದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಎಸ್.ಮಲ್ಲಿಕಾರ್ಜುನ್, ಎ.ನಾಗರಾಜ್, ಗೋಪಿನಾಯ್ಕ, ಎಚ್.ಜಯಣ್ಣ, ಡೋಲಿ ಚಂದ್ರು, ಎಲ್.ಎಂ.ಎಚ್.ಸಾಗರ್, ದಾಕ್ಷಾಯಣಮ್ಮ, ರಾಜೇಶ್ವರಿ, ಶುಭಮಂಗಳಾ, ಮಂಜಮ್ಮ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net