ಇಷ್ಟಲಿಂಗ ಪೂಜೆಯಿಂದ ದ್ವೇಷಕ್ಕೆ ಮುಕ್ತಿ    ಬಸವಪ್ರಭು ಶ್ರೀ

1000349830.jpg
Published on

ದಾವಣಗೆರೆ: ಮೊಬೈಲ್ ಬ್ಯಾಟರಿಯಂತೆಯೇ ಇಷ್ಟಲಿಂಗ ಪೂಜೆ ಮೂಲಕ ಮನಸ್ಸನ್ನು ಜಾರ್ಚ್ ಮಾಡಿದರೆ ಮನೋವಿಕಾರಗಳು, ದ್ವೇಷ ಭಾವನೆಗಳು ದೂರವಾಗಲಿವೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು
ಇಲ್ಲಿನ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಇಷ್ಟಲಿಂಗ ದೀಕ್ಷಾ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಕರ್ನಾಟಕದ ಕೆಜಿಎಫ್‌ನಲ್ಲಿ ಸಿಗುವ ಅದಿರು ಶುದ್ಧಿ ಮಾಡಿದಾಗ ಚಿನ್ನ ದೊರಕಲಿದೆ. ಹಾಲಿನಲ್ಲಿ ತುಪ್ಪವಿದ್ದರೂ ಕಣ್ಣಿಗೆ ಕಾಣುವುದಿಲ್ಲ. ಹಾಲನ್ನು ಸಂಸ್ಕರಿಸಿದಾಗ ತುಪ್ಪ ದೊರಕಲಿದೆ. ಹಾಗೆಯೇ ಮಾನವನ ಅಂತರಂಗದಲ್ಲಿಯೇ ದೇವರಿದ್ದಾನೆ. ನಮ್ಮೊಳಗಿನ ದೇವರನ್ನು ವಿಶ್ವಗುರು ಬಸವಣ್ಣನವರು  ಇಷ್ಟಲಿಂಗದ  ಮೂಲಕ ನೀಡಿದ್ದಾರೆ ಎಂದು ಹೇಳಿದರು.
ನಾವು ಇಷ್ಟಲಿಂಗ ಧರಿಸಿ ನಿತ್ಯ ಶಿವಯೋಗ ಮಾಡುತ್ತಾ ಬಂದೆ ನಮ್ಮ ತನುವನ್ನು ಶುದ್ಧೀಕರಿಸುತ್ತದೆ. ಶರೀರದೊಳಗಿರುವ ದುಶ್ಚಟ , ದುರ್ಗುಣಗಳನ್ನು ತೊಡೆದುಹಾಕುತ್ತದೆ. ಮನಸ್ಸಿನ ವಿಕಾರಗಳು, ಅರಿಷಡ್ವರ್ಗಗಳು ನಾಶವಾಗಲಿವೆ ಎಂದು ತಿಳಿಸಿದರು.
ತನು-ಮನ ಭಾವಗಳಲ್ಲಿರುವ ವಿಷಯ ವಾಸನೆಗಳು ನಿವಾರಣೆಯಾಗಿ ಭಕ್ತನ ಶರೀರವು ಬಸವಣ್ಣನವರು ಹೇಳಿದಂತೆ ದೇಗುಲವಾಗಲಿದೆ. ಆಗ ಮಾನವ  ಚಲಿಸುವ ದೇವಾಲಯ, ಮಾತನಾಡುವ ದೇವರು ಆಗುತ್ತಾನೆ. ಇಂತಹ ವಿಶೇಷ ತತ್ವಗಳನ್ನು ಬಸವಣ್ಣನವರು ಲಿಂಗಾಯತ ಧರ್ಮದಲ್ಲಿ ನೀಡಿದ್ದಾರೆ.
ಮೊಬೈಲ್ ಜನಸಂಪರ್ಕಕ್ಕೆ ಸುಲಭವಾಗಿದೆ. ದೇವರ ಸಂಪರ್ಕಕ್ಕಾಗಿ ಬಸವಣ್ಣನವರು ಇಷ್ಟಲಿಂಗ ಎಂಬ ಮೊಬೈಲನ್ನು ನೀಡಿದ್ದಾರೆ. ಅದನ್ನು ಪೂಜಿಸುತ್ತ ದೇವರೊಂದಿಗೆ ಮಾತನಾಡುವ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ನಿತ್ಯ ಶಿವಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ , ವಿರಕ್ತಮಠ ಸಮಿತಿ ಸದಸ್ಯಾದ ಹಾಸಭಾವಿ ಕರಿಬಸಪ್ಪ , ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶಪ್ಪ , ಟಿ.ಎಂ.ವೀರೇಂದ್ರ , ಎಸ್.ಜಿ.ಸಂಗಪ್ಪ , ಮಹದೇವಮ್ಮ  ಇತರರಿದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net