ಮುಕ್ತ ಚದುರಂಗ ಪಂದ್ಯಾವಳಿ 9ಕ್ಕೆ

1000665779.jpg
Published on

ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಭವನದಲ್ಲಿ ಫೆ. 9ರಂದು ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿದೆ.
ನ್ಯೂ ದಾವಣಗೆರೆ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಈ ಟೂರ್ನಿ ಆಯೋಜನೆಯಾಗಿದೆ. 150 ಸ್ಪರ್ಧಾಳುಗಳು ಭಾಗವಹಿಸುವರು ಎಂದು ಚೆಸ್ ಅಸೋಸಿಯೇಷನ್‌ನ ಕಾರ್ಯರ್ದೀ ಕೆ.ಎಸ್. ಸತೀಶ್ಚಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂನಿಯರ್ ವಿಭಾಗದಲ್ಲಿ 8, 10ಮ 12, 14 ವರ್ಷದೊಳಗಿನ ವಿಭಾಗ ಹಾಗೂ ಹಿರಿಯರ ವಿಭಾಗದಲ್ಲಿ ಟೂರ್ನಿ ನಡೆಯಲಿದ್ದು ಆಯಾ ವಿಭಾಗದಲಿವಿಜೇತರಿಗೆ ಪಾರಿತೋಷಕ ಬಹುಮಾನವಿದೆ. ವೈಯಕ್ತಿಕವಾಗಿ ಅತ್ಯುತ್ತಮ ಉದಯೋನ್ಮುಖ ಬಾಲಕ- ಬಾಲಕಿ ಟ್ರೋಫಿ ನೀಡಲಾಗುವುದು.
ಹಿರಿಯರ ವಿಭಾಗದಲ್ಲಿ ಮೊದಲ ಬಹುಮಾನ 5 ಸಾವಿರ ನಗದು, ಎರಡನೇ ಬಹುಮಾನ 4 ಸಾವಿರ ರೂ, ಮೂರನೇ ಬಹುಮಾನ 3 ಸಾವಿರ ರೂ, ನಾಲ್ಕನೇ ಬಹುಮಾನವಾಗಿ 1500 ರೂ. ಪ್ರಶಸ್ತಿಪತ್ರ ನೀಡಲಾಗುತ್ತಿದೆ. 6ರಿಂದ 10ನೇ ಬಹುಮಾನಿತರಿಗೆ 1500 ನಗದು, 11ರಿಂದ 15ನೇ ಬಹುಮಾನಿತರಿಗೆ 1000 ರೂ, 16ರಿಂದ 20ನೇ ಬಹುಮಾನ ಪಡೆದವರಿಗೆ 800 ನಗದು, ಪ್ರಶಸ್ತಿಪತ್ರವಿದೆ. ಅತ್ಯುತ್ತಮ ಹಿರಿಯ ಆಟಗಾರ ಹಾಗೂ ಆಟಗಾರ್ತಿ ಎಂಬ ವಿಶೇಷ ಬಹುಮಾನವಿದೆ ಎಂದರು.
ಆಸಕ್ತರು ಫೆ. 7ರೊಳಗಾಗಿ ಶ್ರೀಪಾದ ಹೆಗಡೆ 98809-03417, ನಿರ್ಮಲಾ ಸುಭಾಷ್ ಮೊ.ಸಂ. 98441-53466 ಇಲ್ಲಿಗೆ ಹೆಸರು ನೊಂದಾಯಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಗಳ ಪದಾಧಿಕಾರಿಗಳಾದ ಶ್ರೀಪಾದ ಹೆಗಡೆ, ಎಸ್.ಜಿ.ಉಳುವಯ್ಯ, ಎ.ಎಂ. ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net