ಬೆಂಗಳೂರಿನ ಪಿ.ಎಸ್.ಬಿ.ಬಿ ಶಾಲೆ ಚಾಂಪಿಯನ್ ಸಿಬಿಎಸ್‌ಇ ಕ್ಲಸ್ಟರ್-8ರ ಅಥ್ಲೆಟಿಕ್ಸ್ ಮುಕ್ತಾಯ

1000409014.jpg
Published on

ದಾವಣಗೆರೆ: ಬೆಂಗಳೂರಿನ ಪಿ.ಎಸ್.ಬಿ.ಬಿ ಲರ‌್ನಿಂಗ್ ಲೀಡರ್‌ಶಿಪ್ ಅಕಾಡೆಮಿ ಶಾಲೆಯು, ತೋಳಹುಣಸೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಹಮ್ಮಿಕೊಂಡಿದ್ದ ಸಿಬಿಎಸ್‌ಇ ಕ್ಲಸ್ಟರ್-8ರ ಅಥ್ಲೆಟಿಕ್ಸ್ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಗಳಿಸಿದೆ.
14-19ರ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಆಯೋಜಿತವಾಗಿದ್ದ ಕೂಟದಲ್ಲಿ 127 ಅಂಕಗಳನ್ನು ಪಡೆದ ಬೆಂಗಳೂರಿನ ಪಿಎಸ್‌ಬಿಬಿ ಅಕಾಡೆಮಿ ಪಾರಿತೋಷಕಕ್ಕೆ ಪಾತ್ರವಾಯಿತು. 117 ಅಂಕ ಸಂಪಾದಿಸಿದ ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನಕ್ಕೆ ತೃಪ್ತವಾಯಿತು.
ವೈಯಕ್ತಿಕ ಪ್ರಶಸ್ತಿ:
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ಶಮಿತಾ ಜಿ. ರಾವ್, ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಡಿಪಿಎಸ್ ಶಾಲೆಯ ನೀಲ್ ಪಾಲ್ಕೊಂಡ ವೈಯಕ್ತಿಕ ಪಾರಿತೋಷಕ ಪಡೆದರು.
17 ವರ್ಷದೊಳಗಿನವರಲ್ಲಿ ಕ್ರಮವಾಗಿ ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯ ದೇವೇಂದರ್ ರಾವ್, ಬಳ್ಳಾರಿಯ ಜಿಂದಾಲ್ ವಿದ್ಯಾಮಂದಿರದ ಎಸ್. ಸುಚಿತ್ರಾ, 19 ವರ್ಷದೊಳಗಿನವರಲ್ಲಿ ಎಸ್‌ಎಸ್‌ಆರ್‌ವಿಎಂ ಶಾಲೆಯ ಸಾಯಿಶ್ ನರೇಶ್ ಝೇಡ್, ಶ್ರೀ ರವಿಶಂಕರ್ ವಿದ್ಯಾಮಂದಿರದ ಎಸ್.ಆರ್. ಕಿರಣ್ ತಾರಾ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ಕೂಟದಲ್ಲಿ ಸಿ.ಬಿ.ಎಸ್.ಇ ಶಾಲೆಗಳಿಂದ 303 ತಂಡಗಳ 2261 ಕ್ರೀಡಾಪಟುಗಳು ಭಾಗಿಯಾಗಿದ್ದರು. ಭಾನುವಾರ ರಾತ್ರಿ ಸುರಿದ  ಮಳೆಯಿಂದಾಗಿ ತೋಳಹುಣಸೆಯ ಶಾಲಾ ಮೈದಾನ ಒದ್ದೆಯಾಗಿತ್ತು. ಸೋಮವಾರದ ಅಂತಿಮ ದಿನದ ಪಂದ್ಯಗಳನ್ನು ಸಿಂಥಟಿಕ್ಸ್ ಟ್ರ್ಯಾಕ್ ಹೊಂದಿರುವ ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಬೇಕಾಯಿತು.
ತೋಳಹುಣಸೆಯ ಪಿಎಸ್‌ಎಸ್‌ಆರ್ ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು. ಪ್ರಾಚಾರ್ಯೆ ಜೆ.ಎಸ್.ವನಿತಾ, ಅರುಣ್ ಪ್ರಸಾದ್ ಅವರು ಪ್ರಶಸ್ತಿ ವಿತರಿಸಿದರು. ವೀಕ್ಷಕರಾದ ಉತ್ತಮ ಕುಮಾರ್, ತಾಂತ್ರಿಕ ಸಲಹೆಗಾರರಾದ ಪ್ರಮೋದ್ ಪಾಟೀಲ್, ಬಸವರಾಜ್, ನಾಗರಾಜ್, ಸಿದ್ದು ಕೆರೆಸೂರ್, ಉಪ ಪ್ರಾಚಾರ್ಯ ರಮೇಶ್ ಬಾಬು, ಉಮಾಪತಿ, ಶಾಲೆಯ ದೈಹಿಕ ನಿರ್ದೇಶಕ ಸಂಜೀವ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net