ಕೇರಂನಿಂದ ಸ್ವಯಂ ನಿಯಂತ್ರಣ ಶಕ್ತಿ

1001237647.jpg
Published on

ದಾವಣಗೆರೆ: ಕೇರಂ ಆಟವು ದೈನಂದಿನ ಚಿಂತೆಗಳಿಂದ ದೂರವಿರಿಸಿ ಶಿಸ್ತು ಮತ್ತು ಸ್ವಯಂ ನಿಯಂತ್ರಣ ಕಲಿಸಲಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.

ದಾವಣಗೆರೆ ಜಿಲ್ಲಾ ಕೇರಂ ಸಂಸ್ಥೆ, ಕನ್ನಡ ರಣಧೀರ ಪಡೆ ಯುವಕರ ಸಂಘ ಹಾಗೂ ಯಂಗ್ ಚಾಲೆಂಜರ್ಸ್‌ ಕೇರಂ ಸಂಸ್ಥೆ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರಜಿಲ್ಲಾ ಕೇರಂ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕೇರಂ ಆಟುವುದರಿಂದ ಮನಸ್ಸು ಶಾಂತವಾಗಲಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮುಖಾಮುಖಿ ಸಂವಹನ ಮತ್ತು ಬಾಂಧವ್ಯ ಹೆಚ್ಚಾಗಲಿದೆ. ಒಟ್ಟಾಗಿ ಕೆಲಸ ಮಾಡುವ ಕೌಶಲ ಬೆಳೆಸುತ್ತದೆ ಎಂದು ತಿಳಿಸಿದರು.

ಪತ್ರಕರ್ತ ನಾಗರಾಜ ಬಡದಾಳ್, ಕನ್ನಡ ಚಳವಳಿ ಅಧ್ಯಕ್ಷ ಶಿವರತನ್, ರಾಷ್ಟ್ರೀಯ ಕೇರಂ ಪಟು ಕೆ.ಎಸ್. ವಿಜಯಕುಮಾರ್, ಎಚ್. ಮಹೇಶ್, ವೇಯ್ಟ ಲಿಫ್ಟರ್ ಹಾಗೂ ಪವರ್ ಲಿಫ್ಟರ್‌ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್, ಕೇರಂ ಗಣೇಶ್, ಮಾರುತಿ, ಶ್ರೀನಿವಾಸ್, ಗೋಪಿ, ಉಮೇಶ್, ಭುಜಂಗರಾಜ್, ವೆಂಕಟೇಶ್, ಅಂಬರೀಷ್, ಸುರೇಶ್, ಶ್ರೀಧರ್ ಇದ್ದರು.

ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ 80ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಶುಕ್ರವಾರ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾಟ ನಡೆದಿದ್ದು ಶನಿವಾರವೂ ಮುಂದುವರಿಯಲಿದೆ. ಮಹಿಳೆಯರು ಹಾಗೂ 50 ವರ್ಷ ಮೇಲ್ಪಟ್ಟ ಹಿರಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸೋಮವಾರ ಸಿಂಗಲ್ಸ್ ಪಂದ್ಯಾಟಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net