ವಕ್ಫ್ ಹೆಸರು ರದ್ದತಿ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿ

1000504954.jpg
Published on

ದಾವಣಗೆರೆ: ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಿಸಿ ನೋಟಿಸ್ ನೀಡಿರುವುದು ಹಗಲು ದರೋಡೆಯಾಗಿದೆ. ನೋಟಿಸ್ ಹಿಂಪಡೆಯುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಹೇಳಿಕೆ ಕಣ್ಣೊರೆಸುವ ತಂತ್ರವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ ದೂರಿದರು.
ಮುಟೇಷನ್‌ನಲ್ಲಿ ಒಂದಕ್ಷರವನ್ನೂ ತೆಗೆದಿಲ್ಲ, ವಕ್ಫ್ ಹೆಸರನ್ನೂ  ರದ್ದುಪಡಿಸಿಲ್ಲ. ಆದರೆ, ಕಾಂಗ್ರೆಸ್‌ನವರಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ, ಪಹಣಿ-ಮುಟೇಷನ್ ಮತ್ತಿತರ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ರದ್ದುಪಡಿಸುವ ನಿರ್ಣಯವನ್ನು ಸಚಿವ ಸಂಪುಟದ ಸಭೆಯಲ್ಲಿ ಕೈಗೊಳ್ಳಬೇಕುಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಪಿ.ಜೆ. ಬಡಾವಣೆಯ 4 ಎಕರೆ 13 ಗುಂಟೆ ಜಾಗವನ್ನು ಸ್ಥಳೀಯ ನಾಗರಿಕರ ಗಮನಕ್ಕೂ ತರದೇ, ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇದು ವ್ಯವಸ್ಥಿತವಾಗಿ ಆಸ್ತಿ ಕಬಳಿಸುವ ಹುನ್ನಾರ’ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಮಾರಾಟ ಅಥವಾ ಪರಭಾರೆ ಮಾಡಲು ಬರುವುದಿಲ್ಲ. ಬ್ಯಾಂಕ್‌ನವರು ಇನ್ನು ಮುಂದಿನ 20 ರಿಂದ 25 ವರ್ಷಗಳವರೆಗೆ ಸಾಲ ಕೊಡುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಜನಪರ ಕಾಳಜಿ ಇದ್ದಿದ್ದರೆ  ಖುದ್ದು ಸಭೆ ನಡೆಸಿ, ಜನರ ಅಹವಾಲು ಸ್ವೀಕರಿಸಬೇಕಿತ್ತು’ ಎಂದು ಹೇಳಿದರು. ವಕ್ಫ್ ವಿವಾದ ಬಿಜೆಪಿ ಸೃಷ್ಟಿ ಎಂದು ಹೇಳಿದ ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅದನ್ನುಸಾಬೀತುಪಡಿಸಲಿ. ಇಲ್ಲವೇ ಜನರ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದರು. ರಸಚಿವ ಜಮೀರ್ ಕ್ಯಾನ್ಸರ್ ಇದ್ದಂತೆ. ಅವರನ್ನು ತಿದ್ದದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಆಗಲಿದೆ. ಮತಬ್ಯಾಂಕ್‌ ರಾಜಕೀಯಕ್ಕಾಗಿ ಕಾಂಗ್ರೆಸ್ ಅವರನ್ನು ಸಹಿಸಿಕೊಳ್ಳುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ರವಿಕುಮಾರ್, ಕಲ್ಲಪ್ಪ, ಕೊಟ್ರೇಶಗೌಡ, ವಿಶ್ವಾಸ್, ಪಿ.ಸಿ. ಶ್ರೀನಿವಾಸ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net