ದಸರಾ ಹಿನ್ನಲೆಯಲ್ಲಿ ಬೈಕ್ ಜಾಥಾ

1001207959.jpg
Published on

ದಾವಣಗೆರೆ: ವಿಶ್ವ ಹಿಂದು ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಸಹಯೋಗದಲ್ಲಿ ನಡೆಯಲಿರುವ ದಸರಾ ಉತ್ಸವ ಅಂಗವಾಗಿ ನಗರದಲ್ಲಿ ಮಂಗಳವಾರ ಯುವಕರ ಬೈಕ್ ಜಾಥಾ ನಡೆಯಿತು.

ವೈಕುಂಠಧಾಮದಲ್ಲಿ ಶವಸಂಸ್ಕಾರ ಕಾರ್ಯ ನಡೆಸುವ ದಂಪತಿ ಸಿದ್ದರಾಮೇಶ್ವರ ಸ್ವಾಮಿ-ಎನ್. ಸುಧಾರಾಣಿ ಅವರು ಜಾಥಾಕ್ಕೆ ಕೇಸರಿ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಆರಂಭವಾದ ಜಾಥಾ, ಎವಿಕೆ ರಸ್ತೆ, ವಿನೋಬನಗರ ಎರಡನೇ ಮುಖ್ಯರಸ್ತೆ, ಚರ್ಚ್ ರಸ್ತೆ, ಗುಂಡಿ ಮಹದೇವಪ್ಪ ವೃತ್ತ, ಡೆಂಟಲ್ ಕಾಲೇಜು ರ‌ಸ್ತೆ, ನಿಟುವಳ್ಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಈರುಳ್ಳಿ ಮಾರುಕಟ್ಟೆ, ವೆಂಕಟೇಶ್ವರ ವೃತ್ತ, ಗಾಂಧಿ ನಗರ, ಬೂದಾಳ್ ರಸ್ತೆ ಇನ್ನಿತರೆ ರಸ್ತೆಗಳಲ್ಲಿ ಹಾದು ಬೀರಲಿಂಗೇಶ್ವರ ಮೈದಾನಕ್ಕೆ ಮರಳಿತು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡರಾದ ಬಿ.ಜೆ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಯಶವಂತರಾವ್ ಜಾಧವ್, ವಿನಾಯಕ ರಾನಡೆ, ಕೆ.ಆರ್. ಮಲ್ಲಿಕಾರ್ಜುನ, ಉತ್ಸವ ಸಮಿತಿ ಸಹ ಸಂಚಾಲಕ ಆರ್.ಎಲ್. ಶಿವಪ್ರಕಾಶ್, ಪುನೀತ್, ರಾಕೇರ್ಶ ಭಜರಂಗಿ, ಎಚ್.ಬಿ.ನವೀನ್‌ಕುಮಾರ್, ಎಸ್.ಟಿ. ವೀರೇಶ್, ಟಿಂಕರ್ ಮಂಜಣ್ಣ, ಎಲ್. ಧನುಷ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net