ನಾರಾಯಣಸ್ವಾಮಿ ಸಾಧನೆ ಶೂನ್ಯಡಿ. ಬಸವರಾಜ್ ಟೀಕೆ

1000160042.jpg
Published on

ದಾವಣಗೆರೆ : ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾದ ವೈ.ಎ.ನಾರಾಯಣಸ್ವಾಮಿ ಅವರ ಸಾಧನೆ ಶೂನ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ.
ವೈಎಎನ್ ಅವರು  ಚುನಾವಣೆ ಬಂದಾಗ ಕೊಡುಗೆ ನೀಡಿ, ಆಮಿಷವೊಡ್ಡಿ ಮತ್ತೆ ಮುಂದಿನ ಎಲೆಕ್ಷನ್‌ಗೆ ಬರುತ್ತಾರೆ. ಹಾಗಾಗಿ ಅವರ ಬದಲು ಶಿಕ್ಷಕರ ಸಮಸ್ಯೆಗಳಿಗೆ ನೈಜ ಕೆಲಸ ಮಾಡಬಲ್ಲ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬೆಂಬಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸಲು ವಿಧಾನ ಪರಿಷತ್‌ನಲ್ಲಿ ಬಹುಮತ ಅಗತ್ಯವಿದೆ. ಕೆಎಎಸ್ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿಕ್ಷಕರ ಸಮಸ್ಯೆಗಳ ಅರಿವಿರುವ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಹೊನ್ನಾಳಿ, ಚನ್ನಗಿರಿ ಮತದಾರರು ನೈಋತ್ಯ ಪದವೀಧರ ಕ್ಷೇತ್ರದ ಕೈ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು, ಹರಪನಹಳ್ಳಿ ಕ್ಷೇತ್ರದ ಮತದಾರರು ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಚಂದ್ರಶೇಖರ ಪಾಟೀಲ್ ಅವರನ್ನು ಬೆಂಬಲಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಂ. ಮಂಜುನಾಥ, ರಹಮತ್ ಉಲ್ಲಾ, ಬಿ.ಎಚ್. ಉದಯಕುಮಾರ, ಡಿ. ಶಿವಕುಮಾರ್, ಬಿ.ಎಸ್. ವೀರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net