ಬಾಪೂಜಿ ಶಾಲೆಯಲ್ಲಿ ಗ್ರಾಮೋತ್ಸವದ ಚಿತ್ತಾರ   ಹಳ್ಳಿ ಸೊಗಡು ಚಿತ್ರಿಸಿದ ವಿದ್ಯಾರ್ಥಿಗಳು

1000299013.jpg
Published on

ದಾವಣಗೆರೆ: ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮೋತ್ಸವ- ಎತ್ನಿಕ್ ಡೇ ಕಾರ್ಯಕ್ರಮ ಹಳ್ಳಿಯ ಸೊಗಡಿನ ವಾತಾವರಣ ಚಿತ್ರಣವನ್ನು ಮರು ಸೃಷ್ಟಿಸಿತು.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು  ಕೋಲಾಟ, ಕಂಸಾಳೆ, ವೀರಗಾಸೆ, ಮಲೆ ಮಾದೇಶ್ವರನ ನೆನಪಿಸಿದ ಹಾಡು, ಒಕ್ಕಲುತನದ ಗೀತೆಗಳು, ಜಾನಪದ ಹಾಗೂ ಸುಗ್ಗಿ ಹಾಡು, ನೃತ್ಯಗಳೊಂದಿಗೆ ಸಾಂಸ್ಕೃತಿಕ ಮನರಂಜನೆ ನೀಡಿದರು.
ದಾವಣಗೆರೆಯ ಸ್ವದೇಶ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಪ್ರವೀಣ ಕಾರ್ಯಕ್ರಮದಲ್ಲಿ ಮಾತನಾಡಿ ರಜಾ ದಿನಗಳಲ್ಲಿ  ಅಜ್ಜ-ಅಜ್ಜಿ ಮನೆಗೆ ಹೋಗಿ ಹಳ್ಳಿಯ ಸುಂದರ ವಾತಾವರಣವನ್ನು ಆನಂದಿಸಿರಿ ಎಂದು ಹೇಳಿದರು.  
ಗ್ರಾಮೀಣ ದಿರಿಸಿನೊಂದಿಗೆ ಹಳ್ಳಿಯ ಸೊಗಡನ್ನು ಪರಿಚಯಿಸಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಖುಷಿ ನೀಡಿವೆ ಎಂದರಲ್ಲದೆ ಗ್ರಾಮೀಣ ಸಂಸ್ಕೃತಿಯನ್ನು ನೆನಪು ಮಾಡಿದ್ದಕ್ಕೆ ಧನ್ಯವಾದ ಹೇಳಿದರು.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜುಮಾತನಾಡಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ಬರಿ ಪಾಠಕ್ಕೆ ಸೀಮಿತವಾಗದೆ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಹಳ್ಳಿ ಚಿತ್ರಣವನ್ನು ಕಟ್ಟಿಕೊಟ್ಟ ಮಕ್ಕಳ ಶ್ರಮ ಆನಂದ ನೀಡಿದೆ ಎಂದರು.
 ಶಾಲೆಯ ಪ್ರಾಚಾರ್ಯೆ ಜೆ.ಎಸ್.ವನಿತಾ ಮಾತನಾಡಿದರು. ಶೈಕ್ಷಣಿಕ ಮುಖ್ಯಸ್ಥ ಎಂ.ವಾಸಿಂ ಪಾಷಾ, ಪ್ರಾಥಮಿಕ ವಿಭಾಗದ ಮುಖ್ಯಸ್ಥ್ಥೆ ಶೀಭಾರಾಣಿ, ಪಿ.ವಿ.ಪ್ರಭು, ಆರ್. ಸವಿತಾ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net