ಕಳ್ಳರಿಬ್ಬರ ಸೆರೆ, 13.35 ಲಕ್ಷ ರೂ.ನ ಸಾಮಗ್ರಿ ವಶ

1000564836.jpg
Published on

ದಾವಣಗೆರೆ: ವಿವಿಧೆಡೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು 13.35 ಲಕ್ಷ ರೂ. ಮೌಲ್ಯದ ಆಭರಣ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಸೂಫಿಯಾನ್ ಷರೀಫ್ ಆಲಿಯಾಸ್ ಮುಬಾರಕ್ ಕೆ.ಜಿ.ಹಳ್ಳಿ, ಮತ್ತು ಜಾವೀದ್ ಬಂಧಿತ ಆರೋಪಿಗಳಾಗಿದ್ದು. 160 ಗ್ರಾಂ. ತೂಕದ ಚಿನ್ನ,  1.6 ಕೆ.ಜಿ ತೂಕದ ಬೆಳ್ಳಿ ಆಭರಣ, 35 ಸಾವಿರ ರೂ. ಮೌಲ್ಯದ ಒಂದು ಟಿವಿ ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಅಮರಾವತಿ ಕಾಲನಿಯ ಜ್ಯೋಹಿತ್ ಡಿಸೋಜ ಎಂಬುವರ ಮನೆಯಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಆರೋಪಿಗಳು ಗ್ರಾಮಾಂತರ ಠಾಣೆಯ ಇನ್ನೆರಡು, ದಾವಣಗೆರೆ ವಿದ್ಯಾನಗರ ಮತ್ತು ಗಾಂಧಿನಗರ ಠಾಣೆಯ ತಲಾ ಒಂದು ಕೇಸ್ ಸೇರಿ ಒಟ್ಟು ಐದು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದಿದೆ.
ಸಿಪಿಐ ಸುರೇಶ ಸಗರಿ, ಪಿಎಸ್‌ಐಗಳಾದ ಮಂಜುನಾಥ್ ಎಸ್. ಕುಪ್ಪೇಲೂರು, ಮಹಾದೇವ ಸಿದ್ದಪ್ಪ ಭತ್ತೆ, ಎಎಸ್‌ಐ ತಿಪ್ಪೇಸ್ವಾಮಿ ಹಾಗೂ ಅವರ ಸಿಬ್ಬಂದಿ ಪತ್ತೆ ಕಾರ್ಯ ನಡೆಸಿದ್ದು, ತಂಡದ ಕಾರ್ಯಾಚರಣೆಗೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net