ಹರಿಹರದಲ್ಲಿ ಮೂವರು ಕಳ್ಳರ ಸೆರೆ     8 ಲಕ್ಷ ರೂ. ಮೌಲ್ಯದ ಸಾಮಗ್ರಿ ವಶ

1000335611_20240826000920572.jpg
Published on

ದಾವಣಗೆರೆ: ಹರಿಹರ ತಾಲೂಕು ಹನಗವಾಡಿಯ ಇಂಡಸ್ಟ್ರಿಯಲ್ ಏರಿಯಾದ ಗ್ರೀನ್ ರಾಯಲ್ ಪೈಪ್ಸ್, ಡ್ರಿಪ್ ಹಾಗೂ ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಿಹರದ ನಿವಾಸಿಗಳಾದ ಸೈಯದ್ ನೂರುದ್ದೀನ್, ಮೊಹಮ್ಮದ್ ಆಸೀಫ್, ಇರ್ಷದ್ ಬಂಧಿತ ಆರೋಪಿಗಳಾಗಿದ್ದು  ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಆರೋಪಿಗಳು ಆ.20ರಂದು ಕೊಟ್ರೇಶನಾಯ್ಕ ಅವರ ಘಟಕದಲ್ಲಿ ಕಳವಾಗಿದ್ದ, ಮಿಷನರಿಗೆ ಬಳಸಿದ್ದ 8 ಲಕ್ಷ ರೂ. ಮೌಲ್ಯದ ತಾಮ್ರದ ತಂತಿ, ಎಲೆಕ್ಟ್ರಿಕಲ್ ಸಾಮಗ್ರಿ ಜತೆಗೆ ಕೃತ್ಯಕ್ಕೆ ಬಳಸಿದ್ದ 4 ಲಕ್ಷ ರೂ ಮೌಲ್ಯದ ಒಮಿನಿ, 2 ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸೈಯದ್ ನೂರುದ್ದೀನ್ 2016ರಲ್ಲಿ ಬೆಂಗಳೂರಿನ ಜಾಲಹಳ್ಳಿ ಠಾಣೆ, 2010ರಲ್ಲಿ ಹರಿಹರ ನಗರ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ಮತ್ತೊಬ್ಬ ಆರೋಪಿ ಮೊಹಮ್ಮದ್ ಆಸೀಫ್ ವಿರುದ್ಧ 2021 ರಲ್ಲಿ ಹರಿಹರ ನಗರ, 2022 ರಲ್ಲಿ ಬಸವಾಪಟ್ಟಣ ಠಾಣೆಗಳಲ್ಲಿ ದಾಖಲಾದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಹರ ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುನಾಥ ಎಸ್. ಕುಪ್ಪೇಲೂರು ಹಾಗೂ ಅವರ ಸಿಬ್ಬಂದಿ, ಜಿಲ್ಲಾ ಪೊಲೀಸ್ ಕಚೇರಿಯ ಪಿಎಸ್‌ಐ ಮಂಜುನಾಥ ಎಸ್. ಕಲ್ಲೇದೇವರ ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಶ್ವಾನದಳದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net