

ದಾವಣಗೆರೆ: ಬೇತೂರು ರಸ್ತೆಯ ಇಮಾಂ ನಗರದ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ್ದ ಶ್ರೀರಾಮ ಹಾಗೂ ಮುದ್ದ್ದಾಬೋವಿ ಕಾಲನಿಯಲ್ಲಿ ಅಳವಡಿಸಿದ್ದ ಚಾಮುಂಡೇಶ್ವರಿ ಭಾವಚಿತ್ರದ ಫ್ಲೆಕ್ಸ್ ಹರಿದು ವಿರೂಪಗೊಳಿಸಿದ್ದ ಐವರನ್ನು ಆಜಾದ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿತ ಮುಕ್ತಿಯಾರ್, ಅಬೀದ್, ಆತಿಕ್, ಸಾದಿಕ್, ಅಮಾನುಲ್ಲಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರ ಡಿವೈಎಸ್ಪಿ ಬಿ. ಶರಣ ಬಸವೇಶ್ವರ ನೇತೃತ್ವದಲ್ಲಿ ಆಜಾದ್‌ನಗರ ಠಾಣೆ ಪೊಲೀಸ್ ನಿರೀಕ್ಷಕ ಲಕ್ಷ್ಮಣನಾಯ್ಕ ಹಾಗೂ ಅವರ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಮಾಡಿದೆ.
ಮತೀಯ ದ್ವೇಷ ಉಂಟು ಮಾಡುವ ಹಿನ್ನೆಲೆಯಲ್ಲಿ ಸಮಾಜದ ಶಾಂತಿ ಕದಡುವ ಈ ಕೃತ್ಯ ಸಂಬಂಧ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಂಡಿದ್ದರು.