

ದಾವಣಗೆರೆ: ವಿದ್ಯಾಗಮ ಯೋಜನೆಯನ್ನು ಶಾಲೆಗಳ ಆವರಣದಲ್ಲೆ ನಡೆಸಬೇಕು. ಖಾಸಗಿ ಟಿವಿಗಳಲ್ಲಿಯೂ ಶೈಕ್ಷಣಿಕ ಪಾಠ ಪ್ರಸಾರ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಜಾಗೃತಿ ವೇದಿಕೆ ಮತ್ತಿತರ ಸಂಘಟನೆಗಳು ಆಗ್ರಹಿಸಿವೆ.
ಕಾನೂನು ಸೇವಾ ಪ್ರಾಧಿಕಾರ ರಾಜ್ಯ ಸಮಿತಿ ಸದಸ್ಯ ಎಲ್.ಎಚ್. ಅರುಣಕುಮಾರ್ ಮಾತನಾಡಿ, ಶಾಲಾ ಶಿಕ್ಷಣವನ್ನು ಹಂತಹಂತವಾಗಿ ರೂಢಿಗೊಳಿಸಬೇಕು ಎಂದರು.
ಪಾಲಕರು, ಹಿರಿಯ ವಿದ್ಯಾರ್ಥಿಗಳ ಸಂಘ, ಶಾಲೆ ದಾನಿಗಳು, ಎಸ್‌ಡಿಎಂಸಿ ಸಮನ್ವಯ ವೇದಿಕೆ, ಕಾನೂನು ಸೇವಾ ಪ್ರಾಧಿಕಾರ, ಸುವರ್ಣ ಕರ್ನಾಟಕ ವೇದಿಕೆಯ ಪ್ರತಿನಿಧಿಗಳನ್ನು ಒಳಗೊಂಡ ತಂಡ ಬುಧವಾರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.
ಸಾರ್ವಜನಿಕ ಶಿಕ್ಷಣ ಜಾಗೃತಿ ವೇದಿಕೆ ಮುಖಂಡ ಆರ್. ಪರಮೇಶ್ವರಪ್ಪ, ಮತ್ತಿ ಗ್ರಾಪಂ ಸದಸ್ಯ ಪಿ.ಎಂ.ಮಂಜುನಾಥ್, ಸುವರ್ಣ ಕರ್ನಾಟಕ ವೇದಿಕೆ ಅಧ್ಯಕ್ಷ ಸಂತೋಷ್‌ಕುಮಾರ್, ಸಾಮಾಜಿಕ ಹೋರಾಟಗಾರ ವಿ.ಕೆ.ಶಾಸ್ತ್ರಿ, ಜಗದೀಶ್, ರಾಮಘಟ್ಟ ಶಶಿಕುಮಾರ್, ಉಚ್ಚಂಗಿದುರ್ಗ ವಿವೇಕಾನಂದ, ವಕೀಲರಾದ ಕೆ.ಬಿ. ಮಲ್ಲಿಕಾರ್ಜುನ, ಗುರುಮೂರ್ತಿ, ನಿಟ್ಟುವಳ್ಳಿ ವಿಜಯಲಕ್ಷ್ಮೀ ಇದ್ದರು.