ಏ. 7ರಂದು ವೀರಂ ಚಲನಚಿತ್ರ ಬಿಡುಗಡೆ

IMG-20230329-WA0068.jpg
Published on

ದಾವಣಗೆರೆ : ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ವೀರಂ ಚಲನಚಿತ್ರ ಏ. 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಕೆ.ಎಂ. ಶಶಿಧರ್ ಹೇಳಿದರು.
 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಿನಿಮಾದಲ್ಲಿ ಮಾಸ್ ಜತೆಗೆ ಭಾವನಾತ್ಮಕ ಅಂಶಗಳೂ ಇವೆ. ಹಿರಿಯ ನಟ ದಿ. ವಿಷ್ಣುವರ್ಧನ್ ಅವರಿಗೆ ಈ ಚಿತ್ರವನ್ನು ಅರ್ಪಣೆ ಮಾಡಿರುವುದಾಗಿ ತಿಳಿಸಿದರು.
 ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಅಕ್ಕ, ತಮ್ಮಂದಿರ ಪ್ರೀತಿ, ಕಾಳಜಿ ಹಾಗೂ ಆಕಾಂಕ್ಷೆಯನ್ನು ತೋರುವ ಭಾವನಾತ್ಮಕ ಚಿತ್ರವಾಗಿದೆ. ವಿಷ್ಣುವರ್ಧನ್ ಅಭಿಮಾನಿಯಾಗಿ ಅಕ್ಕ-ತಮ್ಮ ಏನೆಲ್ಲ ಮಾಡುತ್ತಾರೆ ಎನ್ನುವುದು ಈ ಸಿನಿಮಾದಲ್ಲಿದೆ ಎಂದು ಹೇಳಿದರು.
 ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಚಿತ್ರದಲ್ಲಿ 4 ಹಾಡುಗಳಿವೆ. ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ ಎಂದರು.
 ಚಿತ್ರದ ಛಾಯಾಗ್ರಹಣವನ್ನು ಲವಿತ್ ಅವರು ಮಾಡಿದ್ದು, ಡಾ.ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ, ಡ್ಯಾನಿ ಮಾಸ್ಟರ್ ಸಾಹಸ, ರವಿಚಂದ್ರನ್ ಸಂಕಲನ ಮಾಡಿದ್ದಾರೆ ಎಂದು ತಿಳಿಸಿದರು.
 ನಾಯಕ ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಬಹಳ ವರ್ಷಗಳ ನಂತರ ಮಾಸ್ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಧೈರ್ಯವಾಗಿ, ಸರಿಯಾದ ಮಾರ್ಗದಲ್ಲಿ ಎದುರಿಸಬೇಕು ಎನ್ನುವ ಸಂದೇಶವನ್ನು ಈ ಚಿತ್ರದ ಕತೆ ನೀಡುತ್ತದೆ ಎಂದರು.
 ಮತ್ತೊಬ್ಬ ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಖದರ್ ಕುಮಾರ್ ಮಾತನಾಡಿದರು. ನಟರಾದ ಶಿಷ್ಯದೀಪಕ್, ಗಿರೀಶ್ ಶಿವಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net