

ಚನ್ನಗಿರಿ: ತಾಲೂಕಿನ ದೊಡ್ಡಘಟ್ಟ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ವಸತಿಯುತ ಪ್ರೌಢಶಾಲೆಯಲ್ಲಿ ಭಾನುವಾರ 1999-2000ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕ ಕೆ.ಸುರೇಶ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಭೂದಾನಿ ಡಿ.ಎಸ್.ಮಂಜುನಾಥ ಉದ್ಘಾಟಿಸಿ ಮಾತನಾಡಿದರು. 25 ವರ್ಷಗಳ ನಂತರ ಗುರುಗಳಿಗಾಗಿ ಗೌರವ ಸಮರ್ಪಣೆಯನ್ನು ಮಾಡಿದ 1999-2000 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಈ ಕಾರ್ಯ ಮುಂಬರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಬೇಕು ಎಂದು ಹೇಳಿದರು. ಶಿಕ್ಷಕರ ಮೇಲೆ ಇರಿಸಿದ ಗೌರವದಿಂದ ಅವಿಸ್ಮರಣೀಯ ದಿನವನ್ನು ಸ್ಮರಿಸುವಂತೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಪ್ರಶಂಸಿಸಿ, ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಐ.ಶರ್ಮತ್ ಕಣದಮನಿ , ಕೆ.ಎಸ್.ರೂಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಿ.ದಾದಾಪೀರ್, ಸಿದ್ದಪ್ಪ, ಎಂ.ವಿ.ಈಶ್ವರಪ್ಪ, ಕೆ.ಗಂಗಾಧರಪ್ಪ, ಬೂದಿಬಸಪ್ಪ, ಎಚ್.ಎಸ್.ಹಾಲೇಶಪ್ಪ, ಎಸ್.ತಿಮ್ಮಯ್ಯ , ಕೃಷ್ಣಪ್ಪ, ಡಿ.ಸಿ.ಮಾಲತೇಶ ಇನ್ನಿತರರು ಇದ್ದರು.